ದ್ವೀಪದಲ್ಲಿ ಸಿಕ್ಕಿಕೊಂಡಿದ್ದ ವಲಸಿಗರ ರಕ್ಷಣೆ: ಟರ್ಕಿ

Update: 2018-11-19 15:10 GMT

ಇಸ್ತಾಂಬುಲ್, ನ. 19: ಗ್ರೀಸ್‌ಗೆ ಪ್ರಯಾಣಿಸಲು ಪ್ರಯತ್ನಿಸಿ ದ್ವೀಪವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ 40 ವಲಸಿಗರನ್ನು ರಕ್ಷಿಸಿರುವುದಾಗಿ ಟರ್ಕಿಯ ತಟರಕ್ಷಣಾ ಪಡೆ ತಿಳಿಸಿದೆ.

ವಲಸಿಗನೊಬ್ಬ ಕಳುಹಿಸಿದ ಮನವಿಗೆ ಸ್ಪಂದಿಸಿ ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ದೋಣಿಯನ್ನು ದ್ವೀಪಕ್ಕೆ ಕಳುಹಿಸಿರುವುದಾಗಿ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಟರಕ್ಷಣಾ ಪಡೆ ತಿಳಿಸಿದೆ.

ಬಲಿಕೆಸಿರ್ ಪ್ರಾಂತದ ಕರಾವಳಿಗೆ ಸಮೀಪದ ದ್ವೀಪದಲ್ಲಿ ಜನರ ಗುಂಪುಗಳು ಇರುವುದನ್ನು ಆಕಾಶದಿಂದ ತೆಗೆದ ಚಿತ್ರಗಳಲ್ಲಿ ಕಾಣಬಹುದಾಗಿತ್ತು.

ವಲಸಿಗರು ಯಾವ ದೇಶದವರು ಎನ್ನುವುದನ್ನು ಹೇಳಿಕೆ ತಿಳಿಸಿಲ್ಲ.

ಯರೋಪ್ ದೇಶಗಳಿಗೆ ಹೋಗುವುದಕ್ಕಾಗಿ ವಲಸಿಗರು ಟರ್ಕಿಯಿಂದ ಸಮುದ್ರವನ್ನು ದಾಟಿ ಗ್ರೀಸ್‌ಗೆ ಹೋಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಸಂಖ್ಯೆ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News