ಆದಷ್ಟು ಬೇಗ ‘ಖಶೋಗಿ ಬಾಯಿ ಮುಚ್ಚಿಸಿ’ ಎಂದಿದ್ದ ಸೌದಿ ಯುವರಾಜ: ಟರ್ಕಿ ಮಾಧ್ಯಮ ವರದಿ

Update: 2018-11-22 16:13 GMT

ಅಂಕಾರ (ಟರ್ಕಿ), ನ. 22: ಎಷ್ಟು ಸಾಧ್ಯವೋ ಅಷ್ಟು ಬೇಗ ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಬಾಯಿ ಮುಚ್ಚಿಸಿ ಎಂಬ ಸೂಚನೆಯನ್ನು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಫೋನ್‌ನಲ್ಲಿ ನೀಡಿದ್ದರು ಹಾಗೂ ಇದರ ಧ್ವನಿಮುದ್ರಣ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಳಿ ಇದೆ ಎಂದು ಟರ್ಕಿಯ ಸುದ್ದಿ ವೆಬ್‌ಸೈಟ್ ‘ಹುರಿಯತ್ ಡೈಲಿ ನ್ಯೂಸ್’ ಗುರುವಾರ ವರದಿ ಮಾಡಿದೆ.

ಕಳೆದ ತಿಂಗಳು ಟರ್ಕಿ ರಾಜಧಾನಿ ಅಂಕಾರಕ್ಕೆ ಭೇಟಿ ನೀಡಿದ್ದ ಸಿಐಎ ನಿರ್ದೇಶಕಿ ಗಿನಾ ಹ್ಯಾಸ್ಪೆಲ್, ಈ ಧ್ವನಿಮುದ್ರಣ ಇರುವ ಬಗ್ಗೆ ಸೂಚನೆ ನೀಡಿದ್ದರು ಎಂಬುದಾಗಿ ಟರ್ಕಿಯ ಅಂಕಣಕಾರರೊಬ್ಬರನ್ನು ಉಲ್ಲೇಖಿಸಿ ವೆಬ್‌ಸೈಟ್ ವರದಿ ಮಾಡಿದೆ.

ಈ ಧ್ವನಿಮುದ್ರಣದ ಬಗ್ಗೆ ತನಗೆ ಮಾಹಿತಿಯಿಲ್ಲ ಎಂಬುದಾಗಿ ಟರ್ಕಿಯ ಅಧಿಕಾರಿಯೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News