ಕ್ಯಾನ್ಸರ್‌ಗೆ ಒಳಗಾದ ನೌಕರರ ಕ್ಷಮೆ ಕೋರಿದ ಸ್ಯಾಮ್ಸಂಗ್

Update: 2018-11-23 14:18 GMT

ಸಿಯೋಲ್, ನ. 23: ಸ್ಯಾಮ್‌ಸಂಗ್ ಇಲೆಕ್ಟ್ರಾನಿಕ್ಸ್ ತನ್ನ ಸೆಮಿಕಂಡಕ್ಟರ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕ್ಯಾನ್ಸರ್‌ಗೆ ಒಳಗಾದ ನೌಕರರ ಕ್ಷಮೆ ಕೋರಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉದ್ಯೋಗ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ, ಸ್ಥಳೀಯ ಚಿಪ್ ಮತ್ತು ಡಿಸ್‌ಪ್ಲೇ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ 2028ರ ವೇಳೆಗೆ ಪರಿಹಾರ ನೀಡುವುದಾಗಿ ದಕ್ಷಿಣ ಕೊರಿಯದ ಕಂಪೆನಿ ಹೇಳಿದೆ.

‘‘ಕಾಯಿಲೆಯಿಂದ ಬಳಲುತ್ತಿರುವ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರ ಬಳಿ ನಾವು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇವೆ’’ ಎಂದು ಸಂಸ್ಥೆಯ ಸಹ ಅಧ್ಯಕ್ಷ ಕಿಮ್ ಕಿಮ-ನಾಮ್ ಹೇಳಿದ್ದಾರೆ. ‘‘ನಮ್ಮ ಸೆಮಿಕಂಡಕ್ಟರ್ ಮತ್ತು ಎಲ್‌ಸಿಡಿ ಕಾರ್ಖಾನೆಗಳಲ್ಲಿನ ಆರೋಗ್ಯ ಸಮಸ್ಯೆಗಳನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ನಾವು ವಿಫಲರಾಗಿದ್ದೇವೆ’’ ಎಂದಿದ್ದಾರೆ.

ವಿವಾದ 2007ರಲ್ಲಿ ಆರಂಭವಾಗಿತ್ತು. ಸುವೊನ್‌ನಲ್ಲಿರುವ ಕಂಪೆನಿಯ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಪೈಕಿ ಕೆಲವರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ ಹಾಗೂ ಹಲವು ಮೃತಪಟ್ಟಿದ್ದಾರೆ ಎಂಬುದಾಗಿ ಮಾಜಿ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಹೇಳಿದ್ದರು.

ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ 320 ಜನರಲ್ಲಿ ಕೆಲಸ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದೆ ಹಾಗೂ ಅವರ ಪೈಕಿ 118 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಅಲ್ ಜಝೀರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News