ಉಗ್ರರನ್ನು ತಡೆದು ಹಲವಾರು ಪ್ರಾಣ ಉಳಿಸಿದ ಮಹಿಳಾ ಪೊಲೀಸ್ ಅಧಿಕಾರಿ ಸುಹೈ ಅಝೀಝ್

Update: 2018-11-23 17:36 GMT

ಕರಾಚಿ ನ.23: ಧೈರ್ಯಶಾಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಚೀನೀ ಕೌನ್ಸುಲೇಟ್ ಕಚೇರಿಯಲ್ಲಿ ಭಯೋತ್ಪಾದಕರು ಸಿಬ್ಬಂದಿ ಸಮೀಪ ಹೋಗದಂತೆ ತಡೆಯುವ ಮೂಲಕ ಹಲವಾರು ಸಿಬ್ಬಂದಿಯ ಪ್ರಾಣ ಉಳಿಸಿದ್ದಾರೆ.

ಭಯೋತ್ಪಾದಕರು ಕೌನ್ಸುಲೇಟ್ ಕಚೇರಿಯ ದ್ವಾರವನ್ನು ತಲುಪಿದ ಕೂಡಲೇ ಸೀನಿಯರ್ ಪೊಲೀಸ್ ಸೂಪರಿಂಟೆಂಡೆಂಟ್ ಸುಹೈ ಅಝೀಝ್ ತಲ್ಪುರ್ ನೇತೃತ್ವದ ಪೊಲೀಸ್ ತಂಡ ಭಯೋತ್ಪಾದಕರ ವಿರುದ್ಧ ಪ್ರಹಾರ ನಡೆಸಿತು.

ಭಯೋತ್ಪಾದಕರು ತಮ್ಮೊಂದಿಗೆ ಆಹಾರ ಮತ್ತು ಔಷಧಿಗಳನ್ನು ತೆಗೆದುಕೊಂಡು ಹೋಗಿದ್ದರು. ಹಾಗಾಗಿ, ಕೌನ್ಸುಲೇಟ್ ಸಿಬ್ಬಂದಿಯನ್ನು ಒತ್ತೆಸೆರೆಯಲ್ಲಿರಿಸಿಕೊಳ್ಳುವ ಉದ್ದೇಶವನ್ನು ಅವರು ಹೊಂದಿದ್ದರು ಎನ್ನಲಾಗಿದೆ.

ಆದರೆ, ಬಂಡೆಯಂತೆ ನಿಂತ ಮಹಿಳಾ ಪೊಲೀಸ್ ಅಧಿಕಾರಿಯ ತಂಡ, ಭಯೋತ್ಪಾದಕರು ಚೀನಿ ಸಿಬ್ಬಂದಿಯ ಬಲಿ ತಲುಪದಂತೆ ನೋಡಿಕೊಂಡಿತು. ಹಾಗಾಗಿ, ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ.

ಸುಹಾಯಿ ಮನೆಯವರ ವಿರೋಧವನ್ನು ಲೆಕ್ಕಿಸದೆ 2013ರಲ್ಲಿ ಉನ್ನತ ಪರೀಕ್ಷೆ ಬರೆದು ಪೊಲೀಸ್ ಇಲಾಖೆಯನ್ನು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News