ಬ್ರಿಟನ್ ಭದ್ರತೆಗೆ ರಶ್ಯ ದೊಡ್ಡ ಬೆದರಿಕೆ: ಸೇನಾ ಮುಖ್ಯಸ್ಥ

Update: 2018-11-24 17:22 GMT

ಲಂಡನ್, ನ. 24: ಐಸಿಸ್ ಮತ್ತು ಅಲ್ ಖಾಯಿದ ಮುಂತಾದ ಭಯೋತ್ಪಾದಕ ಗುಂಪುಗಳಿಗಿಂತ ರಶ್ಯ ಈಗ ಬ್ರಿಟನ್‌ನ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ ಎನ್ನುವುದು ನಿರ್ವಿವಾದ ಎಂದು ಬ್ರಿಟನ್ ಸೇನೆಯ ಮುಖ್ಯಸ್ಥ ಜನರಲ್ ಮಾರ್ಕ್ ಕಾರ್ಲಟನ್-ಸ್ಮಿತ್ ಹೇಳಿದ್ದಾರೆ.

ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಸಾಧಿಸಲು ತನ್ನ ಸೇನೆಯನ್ನು ಬಳಸುವ ಇಂಗಿತವನ್ನು ರಶ್ಯ ತೋರಿಸಿದೆ ಹಾಗೂ ಪಾಶ್ಚಾತ್ಯ ದೇಶಗಳ ಬಲಹೀನತೆಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎಂದು ‘ದ ಡೇಲಿ ಟೆಲಿಗ್ರಾಫ್’ನಲ್ಲಿ ಶನಿವಾರ ಪ್ರಕಟಗೊಂಡ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

‘‘ಪಾಶ್ಚಾತ್ಯ ದೇಶಗಳ ಬಲಹೀನತೆಗಳನ್ನು, ಅದರಲ್ಲೂ ಮುಖ್ಯವಾಗಿ ಸೈಬರ್, ಬಾಹ್ಯಾಕಾಶ, ಸಮುದ್ರದಾಳದ ಯುದ್ಧ ತಂತ್ರಗಾರಿಕೆ ಮುಂತಾದ ಅಸಾಂಪ್ರದಾಯಿಕ ಕ್ಷೇತ್ರಗಳಲ್ಲಿನ ಆ ದೇಶಗಳ ಬಲಹೀನತೆಗಳನ್ನು ಪತ್ತೆಹಚ್ಚಿ ದುರುಪಯೋಗಪಡಿಸಿಕೊಳ್ಳಲು ವ್ಯವಸ್ಥಿತ ಪ್ರಯತ್ನಗಳನ್ನು ರಶ್ಯ ಮಾಡುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News