ಬ್ರೆಕ್ಸಿಟ್ ಒಪ್ಪಂದ ಮನಃಪೂರ್ವಕ ಜಾರಿ: ಬಹಿರಂಗ ಪತ್ರದಲ್ಲಿ ಬ್ರಿಟನ್ ಪ್ರಧಾನಿ ತೆರೇಸಾ ಮೇ

Update: 2018-11-25 17:48 GMT

ಲಂಡನ್, ನ. 25: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಗೆ ಬರುವ ‘ಬ್ರೆಕ್ಸಿಟ್’ ಒಪ್ಪಂದಕ್ಕೆ ಐರೋಪ್ಯ ನಾಯಕರು ಸಹಿ ಹಾಕಿದ ಬಳಿಕ, ಅದನ್ನು ಜಾರಿಗೊಳಿಸಲು ನಾನು ಮನಃಪೂರ್ವಕ ಶ್ರಮಿಸುತ್ತೇನೆ ಎಂಬುದಾಗಿ ರವಿವಾರ ‘ದೇಶಕ್ಕೆ ಬರೆದ ಪತ್ರ’ದಲ್ಲಿ ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ.

ತನ್ನ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನ ಬೆಂಬಲ ಗಳಿಸುವ ಅಗಾಧ ಸವಾಲನ್ನು ಮೇ ಎದುರಿಸುತ್ತಿದ್ದಾರೆ.

ಹಾಲಿ ಒಪ್ಪಂದವನ್ನು ಬ್ರಿಟಿಶ್ ಸಂಸದರು ತಿರಸ್ಕರಿಸಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ, ತೆರೇಸಾ ಮೇ ಅವರ ಸಂಪುಟ ಸದಸ್ಯರು ಹಾಗೂ ಐರೋಪ್ಯ ಒಕ್ಕೂಟ ರಾಜತಾಂತ್ರಿಕರು ‘ಪರ್ಯಾಯ’ ಪ್ರಸ್ತಾಪಗಳನ್ನು ರಹಸ್ಯವಾಗಿ ಸಿದ್ಧಪಡಿಸುತ್ತಿದ್ದಾರೆ ಎಂದು ‘ಸಂಡೇ ಟೆಲಿಗ್ರಾಫ್’ ವರದಿ ಮಾಡಿದೆ.

 ಆದರೆ, ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡ ಪತ್ರದಲ್ಲಿ, ತನ್ನ ಬ್ರೆಕ್ಸಿಟ್ ಒಪ್ಪಂದವು 2016ರಲ್ಲಿ ನಡೆದ ಜನಮತಗಣನೆಯ ಫಲಿತಾಂಶವನ್ನು ಗೌರವಿಸುತ್ತದೆ ಎಂದು ಮೇ ಹೇಳಿದ್ದಾರೆ.

ಐರೋಪ್ಯ ಒಕ್ಕೂಟದಿಂದ ಹೊರ ಬರುವ ಪರವಾಗಿ 52 ಶೇಕಡ ಮಂದಿ ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News