ಹೆಚ್ -1ಬಿ ವೀಸಾ ನೀಡಿಕೆ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆಗೆ ಅಮೆರಿಕ ನಿರ್ಧಾರ

Update: 2018-12-01 07:55 GMT

ವಾಷಿಂಗ್ಟನ್, ಡಿ.1: ಹೆಚ್ಚು ಕೌಶಲ್ಯ ಹೊಂದಿರುವ ಮತ್ತು ಅತಿ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ಹೆಚ್ -1ಬಿ ವೀಸಾದಲ್ಲಿ ಹೆಚ್ಚಿನ ಆದ್ಯತೆ ಕಲ್ಪಿಸಲು  ವೀಸಾ ನೀಡಿಕೆ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರಕಾರ ನಿರ್ಧಾರ  ಕೈಗೊಂಡಿದೆ .

ಹೊಸ ನಿಯಮಕ್ಕೆ ಶುಕ್ರವಾರ  ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹೊಸ ನಿಯಮದಂತೆ ಹೆಚ್ -1 ಬಿ ವೀಸಾದಡಿ ವಿದೇಶಿ ನೌಕರರಿಗೆ ಉದ್ಯೋಗ ನೀಡಿರುವ  ಕಂಪೆನಿಗಳು ಗೊತ್ತುಪಡಿಸಿದ ನೋಂದಣಿ ಅವಧಿಯಲ್ಲಿ ಕಡ್ಡಾಯವಾಗಿ ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳು ( ಯುಎಸ್ ಸಿಐಎಸ್ ) ನೊಂದಿಗೆ ವಿದ್ಯುನ್ಮಾನವಾಗಿ ನೋಂದಾಯಿಸಿಕೊಳ್ಳಬೇಕಾಗಿದೆ.

ಪ್ರತಿ ಆರ್ಥಿಕ ವರ್ಷ  ಹೆಚ್ -1ಬಿ ವೀಸಾ ನೀಡಿಕೆಯ ಮಿತಿಯನ್ನು ಅಮೆರಿಕ ಕಾಂಗ್ರೆಸ್ 65,000 ಸೀಮಿತಗೊಳಿಸಿದೆ. ಹೊಸ ನಿಯಮ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಸ್ನಾತಕೋತ್ತರ ಡಿಗ್ರಿ ಪಡೆದ ಅತಿ ಹೆಚ್ಚು ಕೌಶಲ್ಯಭರಿತ ಮತ್ತು ಹೆಚ್ಚು ವೇತನ ಪಡೆಯುವವರಿಗೆ ವರದಾನವಾಗಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News