ನಾನು ಜೀವಂತವಾಗಿದ್ದೇನೆ, ಸತ್ತಿಲ್ಲ ಎಂದು ಘೋಷಿಸಿದ್ದಾರೆ ಈ ದೇಶದ ಅಧ್ಯಕ್ಷ!

Update: 2018-12-03 16:24 GMT

ಅಬುಜ (ನೈಜೀರಿಯ), ಡಿ. 3: “ನಾನು ಸತ್ತಿದ್ದೇನೆ ಹಾಗೂ ನನ್ನಂತೆಯೇ ಕಾಣುವ ಸುಡಾನ್ ವ್ಯಕ್ತಿಯೊಬ್ಬನು ನನ್ನ ಸ್ಥಾನದಲ್ಲಿ ಇದ್ದಾನೆ” ಎಂಬ ವರದಿಗಳು ಸುಳ್ಳು ಎಂದು ನೈಜೀರಿಯದ ಅಧ್ಯಕ್ಷ ಮುಹಮ್ಮದ್ ಬುಹಾರಿ ತಿಳಿಸಿದ್ದಾರೆ.

ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಅವರು ಈ ಮೂಲಕ ತೆರೆ ಎಳೆದಿದ್ದಾರೆ.

ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬುಹಾರಿ ಈಗಾಗಲೇ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.ಅವರು ಕಳೆದ ವರ್ಷ ರೋಗವೊಂದಕ್ಕೆ ಚಿಕಿತ್ಸೆ ಪಡೆಯುವುದಕ್ಕಾಗಿ ಬ್ರಿಟನ್‌ನಲ್ಲಿ 5 ತಿಂಗಳು ಕಳೆದಿದ್ದರು. ಅವರ ರೋಗ ಯಾವುದೆಂಬುದನ್ನು ಬಹಿರಂಗಪಡಿಸಲಾಗಿಲ್ಲ.

‘‘ಇದು ನಿಜವಾಗಿಯೂ ನಾನೇ. ನಾನು ಭರವಸೆ ನೀಡುತ್ತೇನೆ. ನಾನು ಶೀಘ್ರದಲ್ಲೇ ನನ್ನ 76ನೇ ಹುಟ್ಟಿದ ದಿನವನ್ನು ಆಚರಿಸುತ್ತೇನೆ. ನಾನು ಈಗ ಹಿಂದಿಗಿಂತಲೂ ಈಗ ಬಲಿಷ್ಠವಾಗಿದ್ದೇನೆ’’ ಎಂದು ಪೋಲ್ಯಾಂಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿರುವ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News