ಪಾಕಿಸ್ತಾನ್ ಸ್ಟೇಟ್ ಬ್ಯಾಂಕ್‌ನಲ್ಲಿ ಯುಎಇ 21,000 ಕೋಟಿ ರೂ. ಠೇವಣಿ

Update: 2018-12-21 17:31 GMT

ಅಬುಧಾಬಿ, ಡಿ. 21: ಪಾಕಿಸ್ತಾನದ ಆರ್ಥಿಕ ನೀತಿಗೆ ಆಸರೆ ನೀಡುವುದಕ್ಕಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 3 ಬಿಲಿಯ ಡಾಲರ್ (ಸುಮಾರು 21,000 ಕೋಟಿ ಭಾರತೀಯ ರೂಪಾಯಿ) ಮೊತ್ತವನ್ನು ಪಾಕಿಸ್ತಾನ್ ಸ್ಟೇಟ್ ಬ್ಯಾಂಕ್‌ನಲ್ಲಿ ಠೇವಣಿ ಇಡಲಿದೆ.

ಪಾಕಿಸ್ತಾನ್ ಸ್ಟೇಟ್ ಬ್ಯಾಂಕ್‌ನಲ್ಲಿ ವಿದೇಶಿ ಕರೆನ್ಸಿ ಮೀಸಲು ಪರಿಸ್ಥಿತಿಯನ್ನು ಉತ್ತಮಪಡಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ಠೇವಣಿ ಇಡುವುದಾಗಿ ‘ಅಬುಧಾಬಿ ಅಭಿವೃದ್ಧಿ ನಿಧಿ’ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News