ಸೊಮಾಲಿಯದಲ್ಲಿ ಅಧ್ಯಕ್ಷೀಯ ಅರಮನೆ ಸಮೀಪ ಸ್ಫೋಟ; 16 ಸಾವು

Update: 2018-12-22 16:41 GMT

ಮೊಗಾದಿಶು (ಸೊಮಾಲಿಯ), ಡಿ. 22: ಸೊಮಾಲಿಯದ ಅಧ್ಯಕ್ಷ ಅರಮನೆಯ ಸಮೀಪದ ಸೇನಾ ತಪಾಸಣಾ ಠಾಣೆಯೊಂದರಲ್ಲಿ ಸ್ಫೋಟಕಗಳಿಂದ ತುಂಬಿದ್ದ ವಾಹನವೊಂದು ಶನಿವಾರ ಸ್ಫೋಟಿಸಿದ್ದು ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಹಾಗೂ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅಲ್-ಖಾಯಿದ ಜೊತೆ ನಂಟು ಹೊಂದಿರುವ ಭಯೋತ್ಪಾದಕ ಗುಂಪು ಅಲ್-ಶಬಾಬ್ ದಾಳಿಯ ಹೊಣೆಯನ್ನು ವಹಿಸಿಕೊಂಡಿದೆ.

ಲಂಡನ್‌ನ ‘ಯುನಿವರ್ಸಲ್ ಟಿವಿ’ ಸಂಸ್ಥೆಯ ಮೂವರು ಸಿಬ್ಬಂದಿ ಮೃತರಲ್ಲಿ ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಓರ್ವ ಸಂಸದ ಮತ್ತು ಮೊಗಾದಿಶು ನಗರದ ಉಪ ಮೇಯರ್ ಗಾಯಗೊಂಡವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News