ಸಿರಿಯ ಗಡಿಯಲ್ಲಿ ಟರ್ಕಿ ಸೈನಿಕರ ಜಮಾವಣೆ

Update: 2018-12-25 15:30 GMT

ಬೈರೂತ್ (ಲೆಬನಾನ್), ಡಿ. 25: ಅಮೆರಿಕ ಬೆಂಬಲಿತ ಹಾಗೂ ಕುರ್ದಿಶ್ ನೇತೃತ್ವದ ಪಡೆಗಳ ನಿಯಂತ್ರಣದಲ್ಲಿರುವ ಉತ್ತರ ಸಿರಿಯದ ಪಟ್ಟಣವೊಂದರ ಸಮೀಪ ಟರ್ಕಿ ತನ್ನ ಸೈನಿಕರನ್ನು ಜಮಾಯಿಸುತ್ತಿದೆ ಎಂಬುದಾಗಿ ಟರ್ಕಿ ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ಅಮೆರಿಕವು ಸಿರಿಯದಲ್ಲಿನ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಪೂರ್ವ ಸಿರಿಯದಲ್ಲಿ ನಡೆಸುವ ಸೈನಿಕ ಕಾರ್ಯಾಚರಣೆಯನ್ನು ವಿಳಂಬಿಸುವುದಾಗಿ ಟರ್ಕಿ ಹೇಳಿರುವ ಹೊರತಾಗಿಯೂ ಸೈನಿಕರ ಜಮಾವಣೆ ನಡೆದಿದೆ.

ಕುರ್ದ್ ಬಂಡುಕೋರರನ್ನು ಟರ್ಕಿ ಭಯೋತ್ಪಾದಕರೆಂದು ಪರಿಗಣಿಸುತ್ತದೆ ಹಾಗೂ ಅವರನ್ನು ನಿವಾರಿಸಲು ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಪಣತೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News