ಕಾರು ಕದ್ದ ಬಳಿಕ ಪೊಲೀಸರಿಗೆ ಕರೆ ಮಾಡಿ ಸಹಾಯ ಯಾಚಿಸಿದ ಯುವಕ

Update: 2018-12-27 10:18 GMT

ಒಸ್ಲೋ, ಡಿ. 27: ನಾರ್ವೇ ದೇಶದ ಟ್ರೊಂಡೆಲಗ್ ನಗರದಲ್ಲಿ ನಡೆದ ವಿಲಕ್ಷಣ ಘಟನೆಯಲ್ಲಿ ಕಾರೊಂದನ್ನು ಕದಿಯಲು ಯತ್ನಿಸಿದ ಯುವಕನೊಬ್ಬ ಕಾರಿನೊಳಗೆ ಕೂತಾಗ ಅದು ಲಾಕ್ ಆಗಿ ಅದರೊಳಗಡೆಯೇ ಬಾಕಿಯಾಗಿ ಕೊನೆಗೆ ಅನಿವಾರ್ಯವಾಗಿ ಪೊಲೀಸರಿಗೆ ಸಹಾಯಕ್ಕೆ ಕರೆ ಮಾಡಿದ್ದಾನೆ. ಅಲ್ಲಿಗೆ ಧಾವಿಸಿ ಬಂದ ಪೊಲೀಸರು ಯುವಕನನ್ನು ರಕ್ಷಿಸಿ ನಂತರ ಅಲ್ಲಿಂದ ಆತನನ್ನು ನೇರವಾಗಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ.

ಸೋಮವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಪೊಲೀಸರಿಗೆ ಯುವಕನಿಂದ ಕರೆ ಬಂದಿತ್ತು. ಆತನಿಗೆ ಪೊಲೀಸರ ಪರಿಚಯ ಮೊದಲೇ ಇದ್ದುದರಿಂದ ಪೊಲೀಸರಿಗೆ ಕರೆ ಮಾಡಿದರೆ ತೊಂದರೆಯಾಗದೆಂದು ತಿಳಿದುಕೊಂಡಿದ್ದ ಎಂದು ನಾರ್ವೇ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪೊಲೀಸರು ಯುವಕನನ್ನು ಪ್ರಶ್ನಿಸಿ ನಂತರ ಆತನ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News