ಈಜಿಪ್ಟ್ ನಲ್ಲಿ 40 ಶಂಕಿತ ಉಗ್ರರ ಹತ್ಯೆ

Update: 2018-12-29 11:06 GMT

ಕೈರೋ, ಡಿ.29: ಈಜಿಪ್ಟ್ ನ ಭದ್ರತಾ ಪಡೆಗಳು ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ 40 ಮಂದಿ ಶಂಕಿತ ಉಗ್ರರು ಸಾವಿಗೀಡಾಗಿದ್ದಾರೆ.

ಕೈರೋದಲ್ಲಿ ಪಿರಮಿಡ್ ಸಮೀಪ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿ ಬಾಂಬ್ ಸ್ಪೋಟ ಸಂಭವಿಸಿ ವಿಯೆಟ್ನಾಂನ ಮೂವರು ಪ್ರವಾಸಿಗರು ಮತ್ತು ಈಜಿಪ್ಟ್ ನ ಓರ್ವ ಗೈಡ್ ಸೇರಿದಂತೆ ನಾಲ್ವರು ಮೃತಪಟ್ಟಿದ್ದರು.

ಈ ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಗಿಝಾ ಮತ್ತು ಉತ್ತರ ಸಿನಾಯ್ ಪಟ್ಟಣದಲ್ಲಿ ಅಡಗಿ ಕುಳಿತಿದ್ದ 40 ಮಂದಿ ಶಂಕಿತ ಉಗ್ರರನನ್ನು ಹೊಡೆದುರುಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News