ಜರ್ಮನಿ: ಮರ್ಕೆಲ್, ನೂರಾರು ರಾಜಕಾರಣಿಗಳ ವೈಯಕ್ತಿಕ ಮಾಹಿತಿ ಸೋರಿಕೆ

Update: 2019-01-04 17:38 GMT

ಬರ್ಲಿನ್, ಜ. 4: ಜರ್ಮನಿಯ ಇತಿಹಾಸದಲ್ಲೇ ಅತಿ ದೊಡ್ಡ ಆನ್‌ಲೈನ್ ಮಾಹಿತಿ ಸೋರಿಕೆಯಲ್ಲಿ, ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಮತ್ತು ನೂರಾರು ರಾಜಕಾರಣಿಗಳ ವೈಯಕ್ತಿಕ ಮಾಹಿತಿಗಳನ್ನು ಕನ್ನಗಾರರು(ಹ್ಯಾಕರ್ಸ್) ಬಿಡುಗಡೆ ಮಾಡಿದ್ದಾರೆ.

ಇಮೇಲ್ ವಿಳಾಸಗಳು, ಮೊಬೈಲ್ ಫೋನ್ ಸಂಖ್ಯೆಗಳು, ಗುರುತುಚೀಟಿಗಳ ಚಿತ್ರಗಳು ಮತ್ತು ವೈಯಕ್ತಿಕ ಸಂಭಾಷಣೆಯ ಲಿಖಿತ ಪ್ರತಿಗಳು ಸೋರಿಕೆಯಾಗಿರುವ ಮಾಹಿತಿಗಳಲ್ಲಿ ಸೇರಿವೆ.

ಈ ಮಾಹಿತಿಗಳನ್ನು ಕಳೆದ ವಾರ ‘ಗಾಡ್’ ಎಂಬ ಹೆಸರಿನ ಟ್ವಿಟರ್ ಖಾತೆಯ ಮೂಲಕ ಸೋರಿಕೆ ಮಾಡಲಾಗಿದೆ.

ಕನ್ನಗಾರರು ಈ ರಾಜಕಾರಣಿಗಳ ಫೇಸ್‌ಬುಕ್ ಖಾತೆಗಳು ಮತ್ತು ಟ್ವಿಟರ್ ಪ್ರೊಫೈಲ್‌ಗಳ ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು, ಅಲ್ಲಿಂದ ಒಂದೊಂದೇ ಮಾಹಿತಿಗಳನ್ನು ಸಂಗ್ರಹಿಸುತ್ತಾ ಸಾಗಿದರು ಎನ್ನಲಾಗಿದೆ.

‘‘ಇದು ಅತ್ಯಂತ ವ್ಯವಸ್ಥಿತವಾಗಿ ಮಾಡಲಾದ ಸಾಮಾಜಿಕ ಇಂಜಿನಿಯರಿಂಗ್ ದಾಳಿ’’ ಎಂದು ಮ್ಯೂನಿಕ್ ಟೆಕ್ನಿಕಲ್ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನಿ ಸೈಮನ್ ಹೆಗೆಲಿಚ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News