ವಿಶ್ವಸಂಸ್ಥೆಯ 3ರಲ್ಲಿ 1 ಉದ್ಯೋಗಿಗೆ ಲೈಂಗಿಕ ಕಿರುಕುಳ: ಸಮೀಕ್ಷೆ

Update: 2019-01-16 15:04 GMT

ವಿಶ್ವಸಂಸ್ಥೆ, ಜ. 16: ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾವು ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದೇವೆ ಎಂಬುದಾಗಿ ವಿಶ್ವಸಂಸ್ಥೆಯ ಮೂರನೇ ಒಂದರಷ್ಟು ಉದ್ಯೋಗಿಗಳು ದೂರಿದ್ದಾರೆ.ಈ ಮಾದರಿಯ ಪ್ರಥಮ ಸಮೀಕ್ಷೆಯ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ.

ಅಧ್ಯಯನವು ಆಘಾತಕಾರಿ ಅಂಕಿಸಂಖ್ಯೆಗಳನ್ನು ಒಳಗೊಂಡಿದೆ ಹಾಗೂ ವಿಶ್ವಸಂಸ್ಥೆಯಲ್ಲಿ ಕೆಲಸದ ಸ್ಥಳವನ್ನು ಸುಧಾರಿಸಲು ಏನು ಮಾಡಬೇಕು ಎಂಬ ಬಗ್ಗೆ ವಿವರಗಳನ್ನೂ ಹೊಂದಿದೆ ಎಂದು ಉದ್ಯೋಗಿಗಳಿಗೆ ಬರೆದ ಪತ್ರವೊಂದರಲ್ಲಿ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಾವು ಕನಿಷ್ಠ ಒಂದು ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದೇವೆ ಎಂಬುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ಮೂವರಲ್ಲಿ ಒಬ್ಬರು (33 ಶೇಕಡ ಮಂದಿ) ಹೇಳಿದ್ದಾರೆ. ಆದರೆ, ಅದಕ್ಕೂ ಹಿಂದೆ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಿದವರ ಸಂಖ್ಯೆ 38.7 ಶೇಕಡಕ್ಕೆ ಏರಿದೆ.

ಸಾಮಾನ್ಯ ಮಾದರಿಯ ಲೈಂಗಿಕ ಕಿರುಕುಳವೆಂದರೆ, ಅಸಹ್ಯ ಹುಟ್ಟಿಸುವ ಲೈಂಗಿಕ ಕತೆಗಳು ಅಥವಾ ಹಾಸ್ಯಗಳನ್ನು ಹೇಳುವುದು ಅಥವಾ ರೂಪ, ದೇಹ ಅಥವಾ ಲೈಂಗಿಕ ಚಟುವಟಿಕೆಗಳ ಬಗ್ಗೆ ಮನನೋಯಿಸುವ ಹೇಳಿಕೆಗಳನ್ನು ನೀಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News