ವಲಸೆಗಾಗಿ ಯುರೋಪ್‌ನಲ್ಲಿ ನಕಲಿ ಮದುವೆ: 17 ಪಾಕಿಸ್ತಾನಿ ನಾಗರಿಕರ ಬಂಧನ

Update: 2019-01-16 16:15 GMT

ಲಂಡನ್, ಜ. 16: ವಲಸೆ ಉದ್ದೇಶಕ್ಕಾಗಿ ಪುರುಷರು ನಕಲಿ ಮದುವೆಯಾಗುವ ಹಗರಣವೊಂದನ್ನು ಯುರೋಪ್ ‌ನಲ್ಲಿ ಭೇದಿಸಲಾಗಿದೆ ಹಾಗೂ ಈ ಸಂಬಂಧ ಪಾಕಿಸ್ತಾನದ 17 ನಾಗರಿಕರನ್ನು ಬಂಧಿಸಲಾಗಿದೆ.

ಬಂಧಿತರು ಸಂಘಟಿತ ಅಪರಾಧ ಗುಂಪೊಂದರ ಸದಸ್ಯರು ಎಂದು ಯುರೋಪ್‌ನ ಸಂಸ್ಥೆಗಳಾದ ಯುರೋಪೋಲ್ ಮತ್ತು ಯುರೋಜಸ್ಟ್ ಮಂಗಳವಾರ ಹೇಳಿವೆ.

ಈ ಅಪರಾಧ ಗುಂಪು ನಕಲಿ ಮದುವೆಗಳಿಗಾಗಿ ಡಝನ್‌ಗಟ್ಟಳೆ ಐರೋಪ್ಯ ಮಹಿಳೆಯರನ್ನು ನೇಮಿಸಿತ್ತು.

ಬೆಲ್ಜಿಯಮ್ ಮತ್ತು ಪೋರ್ಚುಗೀಸ್ ವಲಸೆ ಅಧಿಕಾರಿಗಳು ನಡೆಸಿದ ತನಿಖೆಯ ಬಳಿಕ ವಂಚಕರನ್ನು ಬಂಧಿಸಲಾಯಿತು.

‘‘ಈ ಅಪರಾಧಿ ಗುಂಪು ಮುಖ್ಯವಾಗಿ ಪೋರ್ಚುಗೀಸ್ ಮತ್ತು ಪಾಕಿಸ್ತಾನಿ ನಾಗರಿಕರ ನಡುವೆ ನಕಲಿ ಮದುವೆಗಳನ್ನು ಏರ್ಪಡಿಸುತ್ತಿತ್ತು. ತಾವು ಹಿಂದೆಂದೂ ಭೇಟಿಯಾಗದ ಪಾಕಿಸ್ತಾನಿ ಪುರುಷರನ್ನು ಮದುವೆಯಾಗಲು ಪೋರ್ಚುಗೀಸ್ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು’’ ಎಂದು ಯುರೋಪೋಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News