ಗಣಿ ಬಳಿ ಅಣೆಕಟ್ಟು ದುರಂತ: 200ಕ್ಕೂ ಅಧಿಕ ಮಂದಿ ನಾಪತ್ತೆ; 9 ಮೃತ ದೇಹ ಪತ್ತೆ

Update: 2019-01-26 16:10 GMT

ಬ್ರೆಸಿಲಿಯಾ,ಜ.26 ಖಾಸಗಿ ಕಂಪೆನಿಯೊಂದರ ಒಡೆತನದ ಕಬ್ಬಿಣದ ಆದಿರು ಗಣಿ ಪ್ರದೇಶದಲ್ಲಿ ಅಣೆಕಟ್ಟೊಂದು ಒಡೆದ ಬಳಿಕ 200ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ . 9 ಮಂದಿಯ ಶವಗಳು ಈಗಾಗಲೇ ಪತ್ತೆಯಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆಯೆಂದು ರಕ್ಷಣಾ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರೆಝಿಲ್‌ನ ಗಣಿಗಾರಿಕಾ ಕೇಂದ್ರವಾದ ಮಿನಾಸ್ ಗೆರಾಯಿಸ್ ರಾಜ್ಯದಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಅಣೆಕಟ್ಟು ಒಡೆದ ಬಳಿಕ ನೀರಿನ ಪ್ರವಾಹವು ಕೆಫೆಟೇರಿಯಾ ಸೇರಿದಂತೆ ಗಣಿಯ ಕಚೇರಿಗಳನ್ನು ಕೊಚ್ಚಿಕೊಂಡು ಹೋಗಿದೆ.ವ್ಯಾಲೆ ಎಸ್‌ಎ ಒಡೆತನದ ಗಣಿ ಇದಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಆ ಸಂಸ್ಥೆಗೆ ಸೇರಿದ ಗಣಿಯಲ್ಲಿ ದುರಂತ ಸಂಭವಿಸಿರುವುದು ಇದು ಎರಡನೇ ಸಲವಾಗಿದೆ.

ಗಣಿದುರಂತದ ಬಳಿಕ ಕೆಸರಿನ ರಾಶಿಯಲ್ಲಿ ಸಿಲುಕಿಕೊಂಡ ನೂರಾರು ಮಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಿಸುವ ಕಾರ್ಯಾಚರಣೆನ್ನು ಆರಂಭಿಸಲಾಗಿದೆ. ಓರ್ವ ಮಹಿಳೆ ಸೇರಿದಂತೆ ಎಂಟು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಲೆ ಕಂಪೆನಿಯ ಪಾರಾಯಿಯೊಬ ಗಣಿ ಸಂಕೀರ್ಣವು 2017ರಲ್ಲಿ 26 ದಶಲಕ್ಷ ಟನ್ ಕಬ್ಬಿಣದ ಆದಿರನ್ನು ಉತ್ಪಾದಿಸಿದ್ದು, ಇದು ವಾಲೆ ಕಂಪೆನಿ ಉತ್ಪಾದಿಸಿರುವ ಒಟ್ಟು ಕಬ್ಬಿಣದ ಆದಿರಿನ ಶೇ.7ರಷ್ಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News