ಅಂಟಾರ್ಕ್ಟಿಕ ನೀರ್ಗಲ್ಲಿನಲ್ಲಿ 300 ಮೀಟರ್ ಆಳದ ಕುಳಿ

Update: 2019-01-31 17:13 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಜ. 31: ಪಶ್ಚಿಮ ಅಂಟಾರ್ಕ್ಟಿಕದಲ್ಲಿರುವ ‘ತ್ವಾಯಿಟಿಸ್ ಗ್ಲೇಶಿಯರ್’ನ ಬುಡದಲ್ಲಿ 300 ಮೀಟರ್ ಆಳದ ಬೃಹತ್ ಕುಳಿಯೊಂದನ್ನು ‘ನಾಸಾ’ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇದು ಹವಾಮಾನ ಬದಲಾವಣೆಯಿಂದಾಗಿ ಹಿಮಗಡ್ಡೆಗಳು ವೇಗವಾಗಿ ಕರಗುತ್ತಿರುವ ಸೂಚನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಜಾಗತಿಕ ಸಮುದ್ರ ಮಟ್ಟದಲ್ಲಿ ಕ್ಷಿಪ್ರ ಏರಿಕೆಯಾಗುವ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಸಯನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯು, ಸಮುದ್ರ ಮಟ್ಟವು ಎಷ್ಟು ವೇಗವಾಗಿ ಏರುತ್ತದೆ ಎನ್ನುವುದನ್ನು ಲೆಕ್ಕಹಾಕಲು ಅಂಟಾರ್ಕ್ಟಿಕದ ಗ್ಲೇಶಿಯರ್ (ನೀರ್ಗಲ್ಲು)ಗಳ ಒಳಭಾಗಗಳ ವಿವರವಾದ ವೀಕ್ಷಣೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News