ಆ್ಯಪಲ್ ‌ನ ಸ್ವಯಂಚಾಲಿತ ಕಾರು ತಂತ್ರಜ್ಞಾನ ಕದ್ದ ಚೀನಿ ಇಂಜಿನಿಯರ್

Update: 2019-02-01 16:06 GMT

ಸಾನ್‌ಫ್ರಾನ್ಸಿಸ್ಕೊ, ಫೆ. 1: ಆ್ಯಪಲ್ ಕಂಪೆನಿಯ ಅದೃಶ್ಯ ಸ್ವಯಂಚಾಲಿತ ವಾಹನ ಯೋಜನೆಯ ರಹಸ್ಯಗಳನ್ನು ಚೀನಾದ ಇಂಜಿನಿಯರ್ ಒಬ್ಬರು ಕದ್ದಿದ್ದಾರೆ ಎಂಬುದಾಗಿ ಕ್ರಿಮಿನಲ್ ದೂರು ದಾಖಲಾಗಿದೆ.

ಚೀನಾಕ್ಕೆ ಹೋಗುವ ವಿಮಾನವೊಂದನ್ನು ಏರುವ ಒಂದು ದಿನ ಮೊದಲು ಇಂಜಿನಿಯರ್ ಜಿಝಾಂಗ್ ಚೆನ್‌ರನ್ನು ಬಂಧಿಸಲಾಗಿತ್ತು. ಅವರು ಚೀನಾದಲ್ಲಿನ ಕಾರು ಕಂಪೆನಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದರು.

ಚೆನ್ ವಿರುದ್ಧ ವ್ಯಾಪಾರ ರಹಸ್ಯಗಳ ಕಳ್ಳತನ ಆರೋಪವನ್ನು ಹೊರಿಸಲಾಗಿದೆ. ಆರೋಪ ಸಾಬೀತಾದರೆ ಅವರು 10 ವರ್ಷಗಳ ಜೈಲು ಮತ್ತು 2,50,000 ಡಾಲರ್ (ಸುಮಾರು 1.78 ಕೋಟಿ ರೂಪಾಯಿ) ದಂಡವನ್ನು ಎದುರಿಸುತ್ತಿದ್ದಾರೆ.

ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಚೆನ್‌ರನ್ನು ಆ್ಯಪಲ್ ಕಳೆದ ವರ್ಷದ ಜೂನ್‌ನಲ್ಲಿ ಕೆಲಸಕ್ಕೆ ನೇಮಿಸಿಕೊಂಡಿತ್ತು. ಆ್ಯಪಲ್‌ನ ಸ್ವಯಂಚಾಲಿತ ಕಾರು ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಹಾರ್ಡ್‌ವೇರ್ ವಿನ್ಯಾಸ ತಂಡದಲ್ಲಿ ಅವರನ್ನು ನೇಮಿಸಲಾಗಿತ್ತು.

ಜನವರಿಯಲ್ಲಿ ಸ್ವಯಂಚಾಲಿತ ಕಾರು ಯೋಜನೆಯ ಚಿತ್ರಗಳನ್ನು ಚೆನ್ ತೆಗೆಯುವುದನ್ನು ಸಹೋದ್ಯೋಗಿಯೊಬ್ಬರು ನೋಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News