ಬುರ್ಕಿನಾ ಫಾಸೊ: 146 ಬಂಡುಕೋರ ಹತ್ಯೆ

Update: 2019-02-05 17:13 GMT

ಲಂಡನ್, ಫೆ. 5: ಆಫ್ರಿಕ ಖಂಡದ ದೇಶ ಬುರ್ಕಿನಾ ಫಾಸೊದ ವಾಯುವ್ಯ ಭಾಗದಲ್ಲಿ ಬಂಡುಕೋರರ ವಿರುದ್ಧ ನಡೆಸಲಾದ ಮೂರು ಕಾರ್ಯಾಚರಣೆಗಳಲ್ಲಿ 146 ಬಂಡುಕೋರರನ್ನು ಕೊಲ್ಲಲಾಗಿದೆ ಎಂದು ದೇಶದ ಕಮಾಂಡರ್ ಜನರಲ್ ಹೇಳಿದ್ದಾರೆ.

ದೇಶವು ಮಾಲಿ ದೇಶದೊಂದಿಗೆ ಹೊಂದಿರುವ ಗಡಿಯ ಸಮೀಪದಲ್ಲಿ ಬಂಡುಕೋರ ನಿಗ್ರಹ ಕಾರ್ಯಾಚರಣೆ ನಡೆದಿದೆ.

ಸೋಮವಾರ ಮುಂಜಾನೆ ಶಸ್ತ್ರಧಾರಿ ವ್ಯಕ್ತಿಗಳು ಕೈನ್ ಗ್ರಾಮವನ್ನು ಪ್ರವೇಶಿಸಿ 14 ಮಂದಿ ಪುರುಷರು ಮತ್ತು ಮಹಿಳೆಯರನ್ನು ಕೊಂದರು ಎಂದು ಜನರಲ್ ಮೋಯಿಸ್ ಮಿನೌಂಗೌ ಸರಕಾರಿ ಟೆಲಿವಿಶನ್‌ನಲ್ಲಿ ಹೇಳಿದರು.

ಇದಕ್ಕೆ ಪ್ರತಿಯಾಗಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ, ಮಾಲಿ ದೇಶಕ್ಕೆ ಪರಾರಿಯಾಗುತ್ತಿದ್ದ 146 ಮಂದಿಯನ್ನು ಕೊಲ್ಲಲಾಯಿತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News