ಮಸೂದ್ ಅಝರ್ ನಿಷೇಧಕ್ಕೆ ವಿಶ್ವಸಂಸ್ಥೆಯಲ್ಲಿ ಪ್ತಸ್ತಾವ: ಫ್ರಾನ್ಸ್

Update: 2019-02-19 17:07 GMT

ಪ್ಯಾರಿಸ್, ಫೆ. 19: ವಿಶ್ವಸಂಸ್ಥೆಯ ನಿಷೇಧ ಪಟ್ಟಿಯಲ್ಲಿರುವ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ‌ನನ್ನು ನಿಷೇಧಿಸುವ ಪ್ರಸ್ತಾವವನ್ನು ಇನ್ನೆರಡು ದಿನಗಳಲ್ಲಿ ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ಮಂಡಿಸುವುದಾಗಿ ಫ್ರಾನ್ಸ್‌ನ ಮೂಲಗಳು ಮಂಗಳವಾರ ಹೇಳಿವೆ.

ವಿಶ್ವಸಂಸ್ಥೆಯಲ್ಲಿ ಇಂತಹ ಪ್ರಸ್ತಾವಕ್ಕೆ ಫ್ರಾನ್ಸ್ ಕೈಜೋಡಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2017ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಬೆಂಬಲದೊಂದಿಗೆ ಅಮೆರಿಕವು ವಿಶ್ವಸಂಸ್ಥೆಯ ನಿಷೇಧ ಸಮಿತಿ 1267ರಲ್ಲಿ ಮಸೂದ್‌ನನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಮಂಡಿಸಿತ್ತು.

ಆದರೆ, ಆ ಪ್ರಸ್ತಾವನೆಯನ್ನು ಚೀನಾ ತಡೆಹಿಡಿದಿತ್ತು.

‘‘ಮಸೂದ್ ಅಝರ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ಮಂಡಿಸುವುದು. ಇನ್ನೆರಡು ದಿನಗಳಲ್ಲಿ ಅದನ್ನು ಮಾಡಲಾಗುವುದು’’ ಎಂದು ಫ್ರಾನ್ಸ್‌ನ ಹಿರಿಯ ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News