ವಲಸೆಯು ಬ್ರಿಟನ್‌ಗೆ ಒಳ್ಳೆಯದು: ತೆರೇಸಾ ಮೇ

Update: 2019-02-25 17:26 GMT

ಶಾರ್ಮ್ ಅಲ್-ಶೇಖ್ (ಈಜಿಪ್ಟ್), ಫೆ. 25: ವಲಸೆಯ ವಿಷಯದಲ್ಲಿ ತನಗೆ ಅತೃಪ್ತಿಯಿದೆ ಎಂಬುದಾಗಿ ತನ್ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಕೆಲವರು ಮಾಡಿರುವ ಆರೋಪವನ್ನು ನಿರಾಕರಿಸಿರುವ ಬ್ರಿಟನ್ ಪ್ರಧಾನಿ ತೆರೇಸಾ ಮೇ, ವಲಸೆಯು ಬ್ರಿಟನ್‌ಗೆ ಒಳ್ಳೆಯದು ಎಂದಿದ್ದಾರೆ.

ಆದರೆ, ಈ ವಿಷಯದಲ್ಲಿ ಜನರು ಹೆಚ್ಚಿನ ನಿಯಂತ್ರಣ ಬಯಸಿದ್ದಾರೆ ಎಂದು ಹೇಳಿದರು.

ಸರಕಾರವು ಬ್ರೆಕ್ಸಿಟನ್ನು ನಿಭಾಯಿಸುತ್ತಿರುವ ರೀತಿಯನ್ನು ಪ್ರತಿಭಟಿಸಿ ಕಳೆದ ವಾರ ಕನ್ಸರ್ವೇಟಿವ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಆಡಳಿತಾರೂಢ ಪಕ್ಷದ ಸಂಸದೆ ಆನಾ ಸೋಬ್ರಿ ಈ ಆರೋಪ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News