ಪಾಕ್‌ನಿಂದ ಎಫ್-16 ವಿಮಾನಗಳ ದುರ್ಬಳಕೆ ವರದಿಗಳ ಪರಿಶೀಲನೆ: ಅಮೆರಿಕ

Update: 2019-03-06 15:59 GMT

ವಾಶಿಂಗ್ಟನ್, ಮಾ. 6: ಇತ್ತೀಚೆಗೆ ಭಾರತದ ವಿರುದ್ಧ ನಡೆದ ವಾಯು ಸಂಘರ್ಷದಲ್ಲಿ ಪಾಕಿಸ್ತಾನ ಎಫ್-16 ವಿಮಾನಗಳನ್ನು ದುರುಪಯೋಗಪಡಿಸಿದೆ ಎಂಬ ವರದಿಗಳನ್ನು ಅಮೆರಿಕ ‘ಅತ್ಯಂತ ನಿಕಟ’ವಾಗಿ ಗಮನಿಸುತ್ತಿದೆ ಎಂದು ವಿದೇಶ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತೀಯ ವಾಯುಪಡೆಯು ಕಳೆದ ಗುರುವಾರ ಆಕಾಶದಿಂದ ಆಕಾಶಕ್ಕೆ ಹಾರುವ ಕಣ್ಣಿಗೆ ಕಾಣದ ‘ಆ್ಯಮ್‌ರಾಮ್’ ಕ್ಷಿಪಣಿಯ ಭಾಗಗಳನ್ನು ಪ್ರದರ್ಶಿಸಿರುವುದನ್ನು ಸ್ಮರಿಸಬಹುದಾಗಿದೆ. ಇದು ಪಾಕಿಸ್ತಾನ ಎಫ್-16 ವಿಮಾನಗಳನ್ನು ಬಳಸಿದೆ ಎನ್ನುವುದಕ್ಕೆ ಪರಿಪೂರ್ಣ ಪುರಾವೆಯಾಗಿದೆ ಎಂದು ಅದು ಹೇಳಿದೆ.

ಎಫ್-16 ವಿಮಾನಗಳು ಮಾತ್ರ ‘ಆ್ಯಮ್‌ರಾಮ್’ ಕ್ಷಿಪಣಿಗಳನ್ನು ಬಳಸುತ್ತವೆ.

ಆದರೆ, ಪಾಕಿಸ್ತಾನ ಮಾತ್ರ ಯಾವುದೇ ಎಫ್-16 ವಿಮಾನವನ್ನು ಬಳಸಿರುವುದನ್ನು ನಿರಾಕರಿಸುತ್ತಲೇ ಬಂದಿದೆ.

‘‘ನಾವು ಈ ವರದಿಗಳನ್ನು ನೋಡಿದ್ದೇವೆ ಹಾಗೂ ಈ ವಿಷಯವನ್ನು ನಾವು ನಿಕಟವಾಗಿ ಅನುಸರಿಸುತ್ತಾ ಬಂದಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಉಪ ವಕ್ತಾರ ರಾಬರ್ಟ್ ಪ್ಯಾಲಡಿನೊ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News