ಮಹಿಳಾ ದಿನದಂದೇ ಪಾಕಿಸ್ತಾನದ ಮೊದಲ ಹಿಂದು ದಲಿತ ಸೆನೆಟರ್‌ನಿಂದ ಅಧಿವೇಶನದ ಅಧ್ಯಕ್ಷತೆ

Update: 2019-03-09 11:05 GMT

ಇಸ್ಲಾಮಾಬಾದ್,ಮಾ.8: ಪಾಕಿಸ್ತಾನದ ಮೊದಲ ಹಿಂದು ದಲಿತ ಮಹಿಳಾ ಸೆನೆಟರ್ ಕೃಷ್ಣ ಕುಮಾರಿ ಕೊಹ್ಲಿ ಶುಕ್ರವಾರ ಅಂತರ್‌ರಾಷ್ಟ್ರೀಯ ಮಹಿಳಾ ದಿನದಂದೇ ಪಾಕಿಸ್ತಾನದ ಸಂಸತ್‌ನ ಮೇಲ್ಮನೆಯ ಅಧಿವೇಶನದ ಅಧ್ಯಕ್ಷತೆವಹಿಸಿದರು.

ಮಹಿಳೆಯರ ದಿನವಾದ ಇಂದು ನಮ್ಮ ಸಹೋದ್ಯೋಗಿ ಕೃಷ್ಣ ಕುಮಾರಿ ಕೊಹ್ಲಿಯವರಿಗೆ ಲೋಕಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಲು ನಿರ್ಧರಿಸಿದ್ದೇವೆ ಎಂದು ಸೆನೆಟರ್ ಫೈಝಲ್ ಜಾವೇದ್ ಟ್ವೀಟ್ ಮಾಡಿದ್ದರು. 40ರ ಹರೆಯದ ಕೃಷ್ಣ ಕುಮಾರಿ ಕೊಹ್ಲಿ 2018ರ ಮಾರ್ಚ್‌ನಲ್ಲಿ ಸಂಸದೆಯಾಗಿ ಚುನಾಯಿತರಾದರು. ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಕೃಷ್ಣ ಕುಮಾರಿ ಅನೇಕ ವರ್ಷಗಳಿಂದ ಜೀತ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News