ಲಂಡನ್ ಮೇಯರ್ ಸಾದಿಕ್ ಖಾನ್ ‘ವರ್ಷದ ರಾಜಕಾರಣಿ’

Update: 2019-03-09 15:40 GMT

ಲಂಡನ್, ಮಾ. 9: ಬ್ರಿಟನ್ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಶುಕ್ರವಾರ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಂಡನ್ ಮೇಯರ್ ಸಾದಿಕ್ ಖಾನ್‌ಗೆ ‘ವರ್ಷದ ರಾಜಕಾರಣಿ’ ಪ್ರಶಸ್ತಿ ನೀಡಲಾಗಿದೆ.

ಲಂಡನ್‌ನ ರಾಜಕೀಯ ಜೀವನಕ್ಕೆ ಅವರು ನೀಡುತ್ತಿರುವ ದೇಣಿಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಬ್ರಿಟನ್‌ನ ವಾರಪತ್ರಿಕೆ ‘ಏಶ್ಯನ್ ವಾಯ್ಸ್’ ಇಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿತ್ತು.

ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಗ್ಯಾವಿನ್ ವಿಲಿಯಮ್‌ಸನ್‌ರನ್ನು ‘ವರ್ಷದ ಕ್ಯಾಬಿನೆಟ್ ಸಚಿವ’ ಪ್ರಶಸ್ತಿಯಿಂದ ಗೌರವಿಸಿದರೆ, ಭಾರತ ಮೂಲದ ರಾಜಕಾರಣಿ ಪ್ರೀತಿ ಪಟೇಲ್‌ರನ್ನು ‘ವರ್ಷದ ಕನ್ಸರ್ವೇಟಿವ್ ಪಕ್ಷದ ಸಂಸದೆ’ ಎಂಬುದಾಗಿ ಗೌರವಿಸಲಾಯಿತು.

‘ವರ್ಷದ ರಾಜಕಾರಣಿ’ ಪ್ರಶಸ್ತಿ ಪಡೆದ 48 ವರ್ಷದ ಸಾದಿಕ್ ಖಾನ್‌ರ ಅಜ್ಜ -ಅಜ್ಜಿ ಭಾರತದಲ್ಲಿ ಹುಟ್ಟಿದವರು ಹಾಗೂ ಹೆತ್ತವರು ಪಾಕಿಸ್ತಾನದಿಂದ ಬ್ರಿಟನ್‌ಗೆ ವಲಸೆ ಹೋದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News