ಭಾರತೀಯ ಉದ್ಯಮಿಗೆ ಆಕ್ಸ್‌ಫರ್ಡ್ ವಿವಿ ಗೌರವ

Update: 2019-03-26 17:39 GMT

ಲಂಡನ್, ಮಾ. 26: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದ ಸ್ಥಾಪಕ ಸೈರಸ್ ಪೂನಾವಾಲಾ ಸೇರಿದಂತೆ ಎಂಟು ಮಂದಿಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಜೂನ್ 26ರಂದು ನಡೆಯುವ ಸಮಾರಂಭವೊಂದರಲ್ಲಿ ಗೌರವಿಸಲಿದೆ.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಪದವಿಗಳನ್ನೂ ಪ್ರದಾನ ಮಾಡಲಿದೆ.

ಸೈರಸ್ ಪೂನಾವಾಲ, ಪಾಕಿಸ್ತಾನದ ಗಾಯಕ ರಾಹತ್ ಫತೇಹ್ ಅಲಿ ಖಾನ್, ಜೆನಿಫರ್ ಡೌಡ್ನಾ, ಆ್ಯಂಡ್ರಿಯ ಗೇಝ್, ಶಾಫಿ ಗೋಲ್ಡ್‌ವಾಸರ್, ಡೇನಿಯಲ್ ಕ್ಯಾಹ್ನಮೆನ್, ಸೈಮನ್ ವೆಸ್ಲಿ ಮತ್ತು ಯೊ-ಯೊ ಮಾ ಈ ಗೌರವ ಪಡೆಯಲಿರುವವರು.

‘‘ಡಾ. ಸೈರಸ್ ಪೂನಾವಾಲಾ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದ ಸ್ಥಾಪಕ ಹಾಗೂ ಅಧ್ಯಕ್ಷ. 1966ರಲ್ಲಿ ಸ್ಥಾಪಿಸಲ್ಪಟ್ಟ ಸೀರಮ್ ಇನ್‌ಸ್ಟಿಟ್ಯೂಟ್ ಈಗ ಜಗತ್ತಿನ ಅತಿ ದೊಡ್ಡ ಜೀವ ರಕ್ಷಕ ಲಸಿಕೆಗಳ ಉತ್ಪಾದಕನಾಗಿದೆ. ಅದು ವರ್ಷದಲ್ಲಿ 150 ಕೋಟಿ ಡೋಸ್ ಔಷಧಿಯನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು 170ಕ್ಕೂ ಹೆಚ್ಚಿನ ದೇಶಗಳಲ್ಲಿ ಬಳಸಲಾಗುತ್ತಿದೆ’’ ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News