ಭಾರತದ ವಿರುದ್ಧ ಐರೋಪ್ಯ ಒಕ್ಕೂಟ ಡಬ್ಲ್ಯುಟಿಒಗೆ ದೂರು

Update: 2019-04-02 17:59 GMT

ಬ್ರಸೆಲ್ಸ್ (ಬೆಲ್ಜಿಯಮ್), ಎ. 2: ಐರೋಪ್ಯ ಒಕ್ಕೂಟವು ಭಾರತ ಮತ್ತು ಟರ್ಕಿ ದೇಶಗಳ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯಲ್ಲಿ ಎರಡು ಮೊಕದ್ದಮೆಗಳನ್ನು ದಾಖಲಿಸಿದೆ.

ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಆಮದಿನ ಮೇಲೆ ವಿಧಿಸಲಾಗುತ್ತಿರುವ ಸುಂಕವನ್ನು ಪ್ರಶ್ನಿಸಿ ಭಾರತದ ವಿರುದ್ಧ ಹಾಗೂ ಔಷಧಿ ತಯಾರಕರ ಮೇಲೆ ಪರಿಣಾಮ ಬೀರುವ ಕ್ರಮಗಳನ್ನು ತೆಗೆದುಕೊಂಡಿರುವುದಕ್ಕಾಗಿ ಟರ್ಕಿ ವಿರುದ್ಧ ಅದು ದೂರು ನೀಡಿದೆ.

ಇವುಗಳು ಐರೋಪ್ಯ ಒಕ್ಕೂಟದ ಒಂದು ಬಿಲಿಯ ಯುರೋ (7576 ಕೋಟಿ ರೂಪಾಯಿ)ಗೂ ಅಧಿಕ ಮೊತ್ತದ ರಫ್ತುಗಳ ಮೇಲೆ ಪರಿಣಾಮ ಬೀರಿದೆ ಎಂದು 28 ದೇಶಗಳ ಐರೋಪ್ಯ ಒಕ್ಕೂಟ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News