ಭಾರತಕ್ಕೆ 24 ‘ಎಂಎಚ್-60ಆರ್ ಸೀಹಾಕ್’ ಹೆಲಿಕಾಪ್ಟರ್‌ಗಳ ಮಾರಾಟ

Update: 2019-04-03 17:16 GMT

 ವಾಶಿಂಗ್ಟನ್, ಎ. 3: 24 ‘ಎಂಎಚ್-60ಆರ್ ಸೀಹಾಕ್’ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅಮೆರಿಕ ಮಂಗಳವಾರ ಪ್ರಕಟಿಸಿದೆ.

ಹಲವು ಕಾರ್ಯಗಳನ್ನು ನಿಭಾಯಿಸಬಲ್ಲ ಈ ಹೆಲಿಕಾಪ್ಟರ್‌ಗಳು ಸಬ್‌ಮರೀನ್‌ಗಳು ಮತ್ತು ನೌಕೆಗಳನ್ನು ಪತ್ತೆಹಚ್ಚಿ, ಹಿಂಬಾಲಿಸಿ ಅವುಗಳ ಮೇಲೆ ದಾಳಿ ಮಾಡಬಲ್ಲವು.

2.6 ಬಿಲಿಯ ಡಾಲರ್ (ಸುಮಾರು 17,800 ಕೋಟಿ ರೂಪಾಯಿ) ವೌಲ್ಯದ ಕರಾರಿಗೆ ಅಂಗೀಕಾರ ನೀಡಲಾಗಿದೆ ಎಂಬುದಾಗಿ ರಕ್ಷಣಾ ಇಲಾಖೆಗೆ ಸೇರಿದ ಸಂಸ್ಥೆಯೊಂದು ಸಂಸತ್ತು ಕಾಂಗ್ರೆಸ್‌ಗೆ ಮಾಹಿತಿ ನೀಡಿದೆ.

10 ಹೆಲ್‌ಫಯರ್ ಕ್ಷಿಪಣಿಗಳು, 38 ಸುಧಾರಿತ ನಿಖರ ಸಿಸ್ಟಮ್ ರಾಕೆಟ್‌ಗಳು ಮುಂತಾದ ಸಲಕರಣೆಗಳು ಮತ್ತು ಮದ್ದುಗುಂಡುಗಳು ಹಾಗೂ 30 ಎಂಕೆ 54 ಟಾರ್ಪೆಡೊಗಳೂ ಈ ಕರಾರಿನಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News