ಕೊನೆಗೂ ಅಧಿಕಾರದಿಂದ ಕೆಳಗಿಳಿದ ಅಲ್ಜೀರಿಯ ಅಧ್ಯಕ್ಷ

Update: 2019-04-03 17:18 GMT

ಅಲ್ಜೀರ್ಸ್, ಎ. 3: 20 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅಲ್ಜೀರಿಯ ಅಧ್ಯಕ್ಷ ಅಬ್ದುಲಝೀಝ್ ಮಂಗಳವಾರ ಅಧಿಕಾರದಿಂದ ಕೆಳಗಿಳಿದಿದ್ದಾರೆ.

ಅಧ್ಯಕ್ಷರು ಮತ್ತು ಅವರ ಭಾರೀ ಟೀಕೆಗೊಳಗಾಗಿರುವ ಆಂತರಿಕ ವಲಯ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿ ಆರು ವಾರಗಳಿಂದ ದೇಶದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

‘ತಕ್ಷಣ’ ಅಧಿಕಾರದಿಂದ ಕೆಳಗಿಳಿಯುವಂತೆ 82 ವರ್ಷ ಪ್ರಾಯದ ಕಾಯಿಲೆಪೀಡಿತ ಅಬ್ದುಲಝೀಝ್‌ಗೆ ಪ್ರಭಾವಿ ಸೇನೆಯ ಮುಖ್ಯಸ್ಥ ಕಟು ಮಾತುಗಳಿಂದ ತಾಕೀತು ಮಾಡಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಅಧ್ಯಕ್ಷರ ರಾಜೀನಾಮೆ ಘೋಷಣೆ ಬೆನ್ನಿಗೇ ರಾಜಧಾನಿ ಅಲ್ಜೀರ್ಸ್‌ನಲ್ಲಿ ಜನರು ಸಂಭ್ರಮಾಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News