ವಿಶ್ವದ ಅತ್ಯಂತ ದೊಡ್ಡ ವಿಮಾನ ಅಮೆರಿಕದಲ್ಲಿ ಯಶಸ್ವಿ ಹಾರಾಟ

Update: 2019-04-14 09:02 GMT

ಲಾಸ್ ಏಂಜಲಿಸ್, ಎ.14: ವಿಶ್ವದ ಅತ್ಯಂತ ದೊಡ್ಡ ವಿಮಾನ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ಶನಿವಾರ ಯಶಸ್ವಿ ಹಾರಾಟ ನಡೆಸಿ ಗಮನ ಸೆಳೆಯಿತು.

 ಮೈಕ್ರೊಸಾಫ್ಟ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪೌಲ್ ಅಲ್ಲೆನ್ ಅವರ ಸ್ಟ್ರಾಟೋ ಲಾಂಚ್ ಸಿಸ್ಟಮ್ಸ್ ಕಾರ್ಪ್ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಈ ದೈತ್ಯ ವಿಮಾನ ಮುಂಬರುವ ದಿನಗಳಲ್ಲಿ ರಾಕೆಟ್‌ಗಳನ್ನು ಗುರಿ ತಲುಪಿಸಲು ಹಾಗೂ 500,000 ಪೌಂಡ್‌ಗೂ ಅಧಿಕ ತೂಕದ ಇತರ ಬಾಹ್ಯಾಕಾಶ ವಾಹನಗಳನ್ನು ಕಕ್ಷೆಗೆ ಸೇರಿಸುವ ಮಹತ್ವದ ಉದ್ದೇಶಕ್ಕೆ ಬಳಕೆಯಾಗಲಿದೆ.

ಶ್ವೇತವರ್ಣದ ರಾಕ್ ಹೆಸರಿನ ವಿಮಾನದ ರೆಕ್ಕೆಯು ಅಮೆರಿಕದ ಫುಟ್ಬಾಲ್ ಮೈದಾನದ ವಿಸ್ತ್ರೀರ್ಣಕ್ಕಿಂತಲೂ ಉದ್ದವಾಗಿದೆ. ವಿಮಾನದಲ್ಲಿ ಆರು ಇಂಜಿನ್‌ಗಳು ಕಾರ್ಯನಿರ್ವಹಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News