ಮೌಂಟ್ ಎವರೆಸ್ಟ್‌ನಿಂದ 3,000 ಕೆಜಿ ಘನ ತ್ಯಾಜ್ಯ ಸಂಗ್ರಹ

Update: 2019-04-29 15:53 GMT

ಕಠ್ಮಂಡು (ನೇಪಾಳ), ಎ. 29: ನೇಪಾಳವು ಎಪ್ರಿಲ್ 14ರಂದು ಸ್ವಚ್ಛತಾ ಅಭಿಯಾನವೊಂದನ್ನು ಆರಂಭಿಸಿದ್ದು, ಮೌಂಟ್ ಎವರೆಸ್ಟ್‌ನಿಂದ 3,000 ಕೆಜಿ ಘನ ತ್ಯಾಜ್ಯವನ್ನು ಸಂಗ್ರಹಿಸಿದೆ.

ನೇಪಾಳಿ ಹೊಸ ವರ್ಷವಾದ ಎಪ್ರಿಲ್ 14ರಂದು 45 ದಿನಗಳ ‘ಎವರೆಸ್ಟ್ ಸ್ವಚ್ಛತಾ ಅಭಿಯಾನ’ವನ್ನು ಸೊಲುಖುಂಬು ಜಿಲ್ಲೆಯ ಖುಂಬು ಪಸಂಗ್ಲಾಮು ಗ್ರಾಮೀಣ ಮುನಿಸಿಪಾಲಿಟಿ ಆರಂಭಿಸಿದೆ. ಈ ಅವಧಿಯಲ್ಲಿ 10,000 ಕೆಜಿ ಕಸವನ್ನು ಸಂಗ್ರಹಿಸುವ ಗುರಿಯನ್ನು ಅದು ಹೊಂದಿದೆ.

ಈವರೆಗೆ 3,000 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಗಿದ್ದು, 2,000 ಕೆಜಿ ತ್ಯಾಜ್ಯವನ್ನು ಒಖಲ್‌ಡುಂಗಕ್ಕೆ ತರಲಾಗಿದೆ ಹಾಗೂ ಉಳಿದ 1,000 ಕೆಜಿಯನ್ನು ರಾಜಧಾನಿ ಕಠ್ಮಂಡುಗೆ ಒಯ್ಯಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ದಂಡು ರಾಜ್ ಘಿಮಿರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News