ಲಂಕಾ: ಶಾಲಾ ಆವರಣದಿಂದ ಪಿಸ್ತೂಲ್, ಮದ್ದುಗುಂಡು ವಶ

Update: 2019-05-06 16:49 GMT

ಕೊಲಂಬೊ, ಮೇ 6: ಶ್ರೀಲಂಕಾದ ಗಂಪೋಲದಲ್ಲಿರುವ ಬಾಲಕಿಯರ ಶಾಲೆಯೊಂದರ ಆವರಣದಿಂದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ರವಿವಾರ ಹೇಳಿದ್ದಾರೆ.

ಶಾಲೆಯ ಕಾರ್ಮಿಕರೊಬ್ಬರು ಟಿ56 ಬಂದೂಕಿನ 201 ಸುತ್ತು ಮದ್ದುಗುಂಡುಗಳು ಮತ್ತು 25 ಪಿಸ್ತೂಲುಗಳನ್ನು ಒಳಗೊಂಡ ಪೊಟ್ಟಣವೊಂದನ್ನು ಕಸದ ತೊಟ್ಟಿಯೊಂದರಲ್ಲಿ ಪತ್ತೆಹಚ್ಚಿದ್ದಾರೆ ಎಂದು ‘ಡೇಲಿ ಮಿರರ್’ ವರದಿ ಮಾಡಿದೆ.

ಶಾಲೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಇವುಗಳು ಪತ್ತೆಯಾಗಿದ್ದು, ಅವರು ಶಾಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಮತ್ತು ಸೇನೆಗೆ ತಿಳಿಸಲಾಗಿದೆ.

ಈಸ್ಟರ್ ರವಿವಾರದ ಬಾಂಬ್ ದಾಳಿಗಳ ಬಳಿಕ, ಈ ಪ್ರದೇಶದಲ್ಲಿ ತೀವ್ರಗೊಂಡ ತಪಾಸಣೆಯ ಹಿನ್ನೆಲೆಯಲ್ಲಿ ಯಾರೋ ಈ ಶಸ್ತ್ರಗಳನ್ನು ಕಸದ ತೊಟ್ಟಿಗೆ ಎಸೆದು ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News