ಅಮೆರಿಕ ಶಾಲೆಯಲ್ಲಿ ಗುಂಡಿನ ದಾಳಿ: ವಿದ್ಯಾರ್ಥಿ ಮೃತ್ಯು

Update: 2019-05-08 03:36 GMT

ಲಾಸ್‌ ಎಂಜಲೀಸ್, ಮೇ 8: ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಹದಿಹರೆಯದ ವಿದ್ಯಾರ್ಥಿಯೋರ್ವ ಮೃತಪಟ್ಟು, ಇತರ ಹಲವು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಕೊಲೊರಡೊ ರಾಜ್ಯದಲ್ಲಿ ನಡೆದಿದೆ.

"ಸ್ಟೆಮ್ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಗುಂಡೇಟಿನಿಂದ ಮೃತಪಟ್ಟಿದ್ದಾನೆ ಎಂದು ತೀರಾ ನೋವಿನಿಂದ ದೃಢಪಡಿಸುತ್ತಿದ್ದೇವೆ" ಎಂದು ಡಗ್ಲಾಸ್ ಕೌಂಟಿ ಶೆರೀಫ್ ಕಚೇರಿ ಟ್ವೀಟ್ ಮಾಡಿದೆ.

ಮೃತಪಟ್ಟ ವಿದ್ಯಾರ್ಥಿಯ ವಯಸ್ಸು 18 ಎಂದು ಹೇಳಿದೆ.

ಘಟನೆಯಲ್ಲಿ ಗಾಯಗೊಂಡ ಎಂಟು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಕೆಲವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಶೆರೀಫ್ ಟೋನಿ ಸ್ಪರ್ಲಾಕ್ ಹೇಳಿದ್ದರು. ಶಾಲೆಯ ಶಿಕ್ಷಕರು ಅಥವಾ ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ಒಬ್ಬ ವಯಸ್ಕ ಹಾಗೂ ಮತ್ತೊಬ್ಬ ಯುವಕ. ಇಬ್ಬರೂ ಶಾಲೆಯ ಹಳೆ ವಿದ್ಯಾರ್ಥಿಗಳು ಎಂದು ಸ್ಪಷ್ಟಪಡಿಸಲಾಗಿದೆ.

ಇಬ್ಬರು ಸ್ಟೆಮ್ ಶಾಲೆಯ ಒಳಕ್ಕೆ ನುಗ್ಗಿ, ಎರಡು ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಕೂಡಿಹಾಕಿದರು. ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಯಿತು ಎಂದು ವಿವರಿಸಿದ್ದಾರೆ. ಸ್ಥಳದಿಂದ ಬಂದೂಕು (ಹೆಡ್‌ಗನ್) ವಶಪಡಿಸಿಕೊಳ್ಳಲಾಗಿದೆ. 12ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 1800 ವಿದ್ಯಾರ್ಥಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News