ರಾಜ ಮಗುವಿನ ‘ಚಿಂಪಾಂಝಿ ಟ್ವೀಟ್’: ಬಿಬಿಸಿ ರೇಡಿಯೊ ನಿರೂಪಕ ವಜಾ

Update: 2019-05-09 17:52 GMT

ಲಂಡನ್, ಮೇ 9: ‘ರಾಜ ಮಗು ಆಸ್ಪತ್ರೆಯಿಂದ ಹೋಗುತ್ತಿರುವುದು’ ಎಂಬ ಶೀರ್ಷಿಕೆಯಡಿ ಬಟ್ಟೆ ಹಾಕಿದ್ದ ಚಿಂಪಾಂಝಿಯ ಚಿತ್ರವೊಂದನ್ನು ಟ್ವೀಟ್ ಮಾಡಿರುವ ಬ್ರಿಟಿಶ್ ರೇಡಿಯೊ ನಿರೂಪಕರೊಬ್ಬರನ್ನು ಸುದ್ದಿ ಸಂಸ್ಥೆ ಬಿಬಿಸಿ ಉಚ್ಚಾಟಿಸಿದೆ.

ಇಂಗ್ಲೆಂಡ್ ರಾಜಕುಮಾರ ಹ್ಯಾರಿಯ ಪತ್ನಿ ಮೇಘನ್ ಮಾರ್ಕೆಲ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಮಗುವಿಗೆ ‘ಆರ್ಚೀ’ ಎಂಬುದಾಗಿ ಹೆಸರಿಡಲಾಗಿದೆ.

‘‘ಈಗಷ್ಟೇ ನನ್ನನ್ನು ಉಚ್ಚಾಟಿಸಿದರು’’ ಎಂದು ‘ಬಿಬಿಸಿ ರೇಡಿಯೊ 5 ಲೈವ್’ನಲ್ಲಿ ನಿರೂಪಕರಾಗಿದ್ದ ಡ್ಯಾನಿ ಬೇಕರ್ ಟ್ವಿಟರ್‌ನಲ್ಲಿ ಹೇಳಿದರು.

ಈ ಟ್ವೀಟ್ ತಪ್ಪು ಹಾಗೂ ಒಂದು ಆಕಾಶವಾಣಿ ನಿಲಯವಾಗಿ ನಾವು ಪಾಲಿಸುವ ವೌಲ್ಯಗಳಿಗೆ ಅದು ವಿರುದ್ಧವಾಗಿದೆ ಎಂದು ಬಿಬಿಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News