ಅಮೆರಿಕದ 4.23 ಲಕ್ಷ ಕೋಟಿ ಮೌಲ್ಯದ ಸರಕುಗಳಿಗೆ ಆಮದು ತೆರಿಗೆ: ಚೀನಾ ಘೋಷಣೆ

Update: 2019-05-13 18:14 GMT

ಬೀಜಿಂಗ್, ಮೇ 13: ಚೀನಾದ ಎಲ್ಲ ವಸ್ತುಗಳಿಗೆ ಹೆಚ್ಚುವರಿ ಆಮದು ತೆರಿಗೆಯನ್ನು ವಿಧಿಸುವುದಾಗಿ ಅಮೆರಿಕ ಘೋಷಿಸಿರುವುದಕ್ಕೆ ಪ್ರತಿಯಾಗಿ, ಅಮೆರಿಕದ 60 ಬಿಲಿಯ ಡಾಲರ್ (ಸುಮಾರು 4.23 ಲಕ್ಷ ಕೋಟಿ ರೂಪಾಯಿ) ವಸ್ತುಗಳಿಗೆ ಆಮದು ತೆರಿಗೆಯನ್ನು ವಿಧಿಸುವುದಾಗಿ ಚೀನಾ ಸೋಮವಾರ ಪ್ರಕಟಿಸಿದೆ.

ಅಮೆರಿಕದಿಂದ ಮಾಡಿಕೊಳ್ಳಲಾಗುವ ಆಮದುಗಳ ಮೇಲೆ 5 ಶೇಕಡದಿಂದ 25 ಶೇಕಡದವರೆಗೆ ತೆರಿಗೆ ವಿಧಿಸುವುದಾಗಿ ಚೀನಾ ಸಚಿವ ಸಂಪುಟ ಸ್ಟೇಟ್ ಕೌನ್ಸಿಲ್ ತೆರಿಗೆ ನೀತಿ ಆಯೋಗ ನೀಡಿರುವ ಹೇಳಿಕೆಯೊಂದು ತಿಳಿಸಿದೆ. ಹೆಚ್ಚುವರಿ ತೆರಿಗೆಯು ಜೂನ್ 1ರಿಂದ ಜಾರಿಗೆ ಬರಲಿದೆ.

ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಸಮರವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಗಳು ಶುಕ್ರವಾರ ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.

 ಚೀನಾದಿಂದ ಮಾಡಿಕೊಳ್ಳಲಾಗುವ 200 ಬಿಲಿಯ ಡಾಲರ್ (ಸುಮಾರು 14.11 ಲಕ್ಷ ಕೋಟಿ ರೂಪಾಯಿ) ಸರಕಿನ ಮೇಲೆ 25 ಶೇಕಡ ಆಮದು ತೆರಿಗೆ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಆದೇಶಿಸಿದ್ದಾರೆ ಹಾಗೂ ಉಳಿದ 300 ಬಿಲಿಯ ಡಾಲರ್ (ಸುಮಾರು 21.16 ಲಕ್ಷ ಕೋಟಿ ರೂಪಾಯಿ) ವೌಲ್ಯದ ಸರಕುಗಳ ಮೇಲೆ ಹೊಸ ತೆರಿಗೆ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News