ದಕ್ಷಿಣ ಆಫ್ರಿಕ: ನೂತನ ಅಧ್ಯಕ್ಷರಾಗಿ ರಮಫೋಸ ಅಧಿಕಾರ ಸ್ವೀಕಾರ

Update: 2019-05-27 17:57 GMT

ಪ್ರಿಟೋರಿಯ (ದಕ್ಷಿಣ ಆಫ್ರಿಕ), ಮೇ 27: ದಕ್ಷಿಣ ಆಫ್ರಿಕದ ನೂತನ ಅಧ್ಯಕ್ಷರಾಗಿ ರಾಜಧಾನಿ ಪ್ರಿಟೋರಿಯದಲ್ಲಿ ಸಿರಿಲ್ ರಮಫೋಸ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.

ಪ್ರಿಟೋರಿಯದ ರಗ್ಬಿ ಸ್ಟೇಡಿಯಂನಲ್ಲಿ ನಡೆದ ಬಣ್ಣದ ಸಮಾರಂಭದಲ್ಲಿ ಸುಮಾರು 36,000 ಜನರು ಭಾಗವಹಿಸಿದ ಬೃಹತ್ ಸಮಾರಂಭದಲ್ಲಿ ರಮಫೋಸ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ 40ಕ್ಕೂ ಅಧಿಕ ದೇಶಗಳ ಸರಕಾರಿ ಮುಖ್ಯಸ್ಥರು ಉಪಸ್ಥಿತರಿದ್ದರು.

ರಮಫೋಸ ತನ್ನ ಪಕ್ಷ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ (ಎಎನ್‌ಸಿ)ನ ಆಂತರಿಕ ರಾಜಕೀಯದ ಮೂಲಕ ಕಳೆದ ವರ್ಷ ದೇಶದ ಅಧ್ಯಕ್ಷರಾದರು ಹಾಗೂ ಮೇ 8ರಂದು ನಡೆದ ಚುನಾವಣೆಯಲ್ಲಿ ಬಹುಮತ ಪಡೆದರು. ನಿರುದ್ಯೋಗ, ಅಸಮಾನತೆ, ಅಪರಾಧ ಮತ್ತು ಭ್ರಷ್ಟಾಚಾರದಿಂದ ಬಳಲುತ್ತಿರುವ ದೇಶವೊಂದನ್ನು ಸುಧಾರಣೆಯ ಪಥದಲ್ಲಿ ಒಯ್ಯುವ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ.

‘‘ನಮ್ಮ ದೇಶದಲ್ಲಿ ಹೊಸ ಶಕೆಯೊಂದು ಉದಯವಾಗಿದೆ. ದಕ್ಷಿಣ ಆಫ್ರಿಕದ ಆಕಾಶದಲ್ಲಿ ಪ್ರಖರ ದಿನವೊಂದು ಉದಯಿಸುತ್ತಿದೆ’’ ಎಂದು ಪ್ರಮಾಣವಚನ ಸ್ವೀಕಾರದ ಬಳಿಕ ನೂತನ ಅಧ್ಯಕ್ಷರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News