ಮಕ್ಕಾದ ಮಸೀದಿಯಲ್ಲಿ ಝಮ್‌ಝಮ್ ನೀರು ಪೂರೈಕೆಯಲ್ಲಿ ಏರಿಕೆ

Update: 2019-05-28 16:54 GMT

ಮಕ್ಕಾ (ಸೌದಿ ಅರೇಬಿಯ), ಮೇ 28: ಮಕ್ಕಾದ ಮಸೀದಿಗೆ ಭೇಟಿ ನೀಡುವ ಯಾತ್ರಿಕರು ಮತ್ತು ಸಂದರ್ಶಕರು ‘ಝಮ್‌ಝಮ್’ ನೀರನ್ನು ಕುಡಿಯಬಯಸಿದರೆ ಹಾಗೂ ತಮ್ಮ ಕುಟುಂಬಗಳಿಗಾಗಿ ಬಾಟಲೀಕೃತ ಝಮ್‌ಝಮ್ ನೀರನ್ನು ಒಯ್ಯಲು ಬಯಸಿದರೆ, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಈಗ ಮಾಡಲಾಗಿದೆ.

ಎರಡು ಪವಿತ್ರ ಮಸೀದಿಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಯು ತನ್ನ ಸುಕಿಯಾ ಝಮ್‌ಝಮ್ ಇಲಾಖೆಯ ಮೂಲಕ ಮಕ್ಕಾ ಮಸೀದಿಗೆ ಪ್ರತಿದಿನ 10,000 ಹೆಚ್ಚುವರಿ ಝಮ್‌ಝಮ್ ನೀರಿನ ಕಂಟೇನರ್‌ಗಳನ್ನು ಪೂರೈಸುತ್ತಿದೆ. ಇದರೊಂದಿಗೆ ಈ ಮಸೀದಿಗೆ ಪ್ರತಿ ದಿನ ಪೂರೈಕೆಯಾಗುತ್ತಿರುವ ಝಮ್‌ಝಮ್ ನೀರಿನ ಕಂಟೇನರ್‌ಗಳ ಸಂಖ್ಯೆ 25,000ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News