ವರ್ಜೀನಿಯ ಬೀಚ್‌ನಲ್ಲಿ ಗುಂಡು ಹಾರಾಟ: 12 ಸಾವು

Update: 2019-06-01 16:57 GMT

ವಾಶಿಂಗ್ಟನ್, ಜೂ. 1: ಅಮೆರಿಕದ ವರ್ಜೀನಿಯ ರಾಜ್ಯದ ವರ್ಜೀನಿಯ ಬೀಚ್‌ನಲ್ಲಿರುವ ಸರಕಾರಿ ಕಟ್ಟಡ ಸಂಕೀರ್ಣವೊಂದರಲ್ಲಿ ಶುಕ್ರವಾರ ಅಪರಾಹ್ನ ಬಂದೂಕುಧಾರಿಯೊಬ್ಬ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು 12 ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬಳಿಕ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬಂದೂಕುಧಾರಿಯೂ ಸತ್ತಿದ್ದಾನೆ ಎಂದು ಪೊಲೀಸ್ ಮುಖ್ಯಸ್ಥರು ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.

ಬಂದೂಕುಧಾರಿಯು ನಗರ ಯೋಜನಾ ಇಂಜಿನಿಯರ್ ಆಗಿದ್ದು, ಸ್ಥಳೀಯ ಮುನಿಸಿಪಾಲಿಟಿಯಲ್ಲಿ 15 ವರ್ಷ ಕೆಲಸ ಮಾಡಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News