ಭಾರತ ಮೂಲದ ಕುಮಾರ್ ಅಯ್ಯರ್ ಬ್ರಿಟನ್ ವಿದೇಶ ಕಚೇರಿಗೆ ನೇಮಕ

Update: 2019-06-07 16:43 GMT

ಲಂಡನ್, ಜೂ. 7: ಬ್ರಿಟನ್ ಸರಕಾರವು ಭಾರತ ಮೂಲದ ಕುಮಾರ್ ಅಯ್ಯರ್‌ರನ್ನು ವಿದೇಶ ಮತ್ತು ಕಾಮನ್‌ವೆಲ್ತ್ ಕಚೇರಿ (ಎಫ್‌ಸಿಒ)ಯ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಿಸಿದೆ. ಇದರೊಂದಿಗೆ ಅವರು ಹಣಕಾಸು ಇಲಾಖೆಯ ಆಡಳಿತ ಮಂಡಳಿಯ ಪ್ರಥಮ ಭಾರತ ಮೂಲದ ಸದಸ್ಯನಾಗಿದ್ದಾರೆ.

ಲಂಡನ್‌ನಲ್ಲಿ ಜನಿಸಿದ ಅಯ್ಯರ್ ತನ್ನ ಬಾಲ್ಯದ ದಿನಗಳನ್ನು ಭಾರತದಲ್ಲಿ ಕಳೆದಿದ್ದರು. ಈ ಹಿಂದೆ ಅವರು ಮುಂಬೈಯಲ್ಲಿ ಬ್ರಿಟನ್‌ನ ಉಪ ಹೈಕಮಿಶನರ್ ಆಗಿದ್ದರು.

  ಮುಖ್ಯ ಅರ್ಥಶಾಸ್ತ್ರಜ್ಞನಾಗಿ ಜುಲೈಯಲ್ಲಿ ನೂತನ ಅಧಿಕಾರ ಸ್ವೀಕರಿಸುವ ಅವರು, ಎಫ್‌ಸಿಒದ ಆರ್ಥಿಕ ವಿಭಾಗದ ಉಸ್ತುವಾರಿ ಹೊಂದಲಿದ್ದಾರೆ. ಇದು ವಿದೇಶ ನೀತಿ ರೂಪಿಸುವಿಕೆಗಾಗಿ ಆರ್ಥಿಕ ವಿಶ್ಲೇಷಣೆಯನ್ನು ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News