ಇಥಿಯೋಪಿಯ ಪ್ರಧಾನಿಯಿಂದ ಸುಡಾನ್ ಸೇನೆ, ಪ್ರತಿಭಟನಕಾರರ ನಡುವೆ ಸಂಧಾನ

Update: 2019-06-07 17:14 GMT

ಖಾರ್ತೂಮ್ (ಸುಡಾನ್), ಜೂ. 7: ಸುಡಾನ್‌ನಲ್ಲಿ ಆಡಳಿತ ನಡೆಸುತ್ತಿರುವ ಸೇನಾ ಜನರಲ್‌ಗಳು ಮತ್ತು ಪ್ರತಿಭಟನಕಾರರ ನಡುವೆ ಮಾತುಕತೆ ಏರ್ಪಡಿಸುವುದಕ್ಕಾಗಿ ಇಥಿಯೋಪಿಯ ಪ್ರಧಾನಿ ಅಬಿಯ್ ಅಹ್ಮದ್ ಶುಕ್ರವಾರ ಸುಡಾನ್ ರಾಜಧಾನಿ ಖಾರ್ತೂಮ್‌ಗೆ ಆಗಮಿಸಿದ್ದಾರೆ.

ಈ ವಾರ ಪ್ರತಿಭಟನಾನಿರತರ ಮೇಲೆ ಸೇನೆ ನಡೆಸಿದ ಭೀಕರ ದಮನ ಕಾರ್ಯಾಚರಣೆಯ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಸೇನಾ ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಪ್ರತಿಭಟನಕಾರರು ಹತರಾಗಿದ್ದಾರೆ.

ಖಾರ್ತೂಮ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಬಿಯ್, ಜನರಲ್‌ಗಳೊಂದಿಗೆ ಮಾತುಕತೆಗಳನ್ನು ನಡೆಸುವುದಕ್ಕಾಗಿ ತೆರಳಿದರು ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಥಿಯೋಪಿಯ ಪ್ರಧಾನಿ ಬಳಿಕ ಪ್ರತಿಭಟನಕಾರರ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News