ಜಿ20 ಶೃಂಗ: ಹವಾಮಾನ ಬದಲಾವಣೆ ಹೇಳಿಕೆಯ ಭಾಷೆ ಬಗ್ಗೆ ಚರ್ಚೆ

Update: 2019-06-27 18:22 GMT

 ಟೋಕಿಯೊ, ಜೂ. 27: ಹವಾಮಾನ ಬದಲಾವಣೆಯನ್ನು ಎದುರಿಸುವುದಕ್ಕೆ ಸಂಬಂಧಿಸಿದ ಜಿ20 ಶೃಂಗ ಸಮ್ಮೇಳನದ ಹೇಳಿಕೆಯ ಭಾಷೆಯ ಬಗ್ಗೆ, ಪಾಲ್ಗೊಳ್ಳುವ ದೇಶಗಳ ಪ್ರತಿನಿಧಿಗಳು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಭಾಷೆ ಮೃದುವಾಗಿರಬೇಕು ಎಂಬುದಾಗಿ ಅಮೆರಿಕ ಬಯಸಿದರೆ, ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಐರೋಪ್ಯ ದೇಶಗಳು ವ್ಯಕ್ತಪಡಿಸಿವೆ.

ಜಾಗತಿಕ ತಾಪಮಾನದ ಕುರಿತ ಚರ್ಚೆಗೆ ಸಂಬಂಧಿಸಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಹವಾಮಾನ ಬದಲಾವಣೆಗೆ ಸಂಬಂಧಿಸಿ ಮಹತ್ವದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಹೊರಗೆ ತಂದ ಬಳಿಕ, ಈ ವಿಷಯದ ಬಗ್ಗೆ ಬಹುಪಕ್ಷೀಯ ವೇದಿಕೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು ನಿಂತು ಹೋಗಿವೆ.

ಜಿ20 ಶೃಂಗಸಭೆಯ ಕರಡು ಹೇಳಿಕೆಯು, 2015ರ ಪ್ಯಾರಿಸ್ ಒಪ್ಪಂದದ ಜಾರಿಯನ್ನು ಬೆಂಬಲಿಸುತ್ತದೆ. ಅದೂ ಅಲ್ಲದೆ, 200ಕ್ಕೂ ಅಧಿಕ ದೇಶಗಳು ಸಹಿ ಹಾಕಿರುವ ಒಪ್ಪಂದವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂಬುದಾಗಿಯೂ ಕರಡಿನಲ್ಲಿ ಹೇಳಲಾಗಿದೆ.

ಇದಕ್ಕೂ ಹಿಂದಿನ ಕರಡಿನಲ್ಲಿ, ಅಮೆರಿಕದ ಒತ್ತಡಕ್ಕೆ ಒಳಗಾಗಿ ಈ ಪದಗಳನ್ನು ಕೈಬಿಡಲಾಗಿತ್ತು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News