ಫ್ರಾನ್ಸ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ಉಷ್ಣತೆ

Update: 2019-06-28 17:17 GMT

ಪ್ಯಾರಿಸ್, ಜೂ. 28: ಫ್ರಾನ್ಸ್‌ನಲ್ಲಿ ಶುಕ್ರವಾರ 44.3 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದ್ದು, ಫ್ರಾನ್ಸ್‌ನ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಫ್ರಾನ್ಸ್‌ನ ಹವಾಮಾನ ಸಂಸ್ಥೆ ಮೆಟ್ರೊ-ಫ್ರಾನ್ಸ್ ಹೇಳಿದೆ.

ಈ ಪ್ರಮಾಣದ ಉಷ್ಣತೆ ದೇಶದ ಆಗ್ನೇಯದ ಪಟ್ಟಣ ಕಾರ್ಪೆಂಟ್ರಾಸ್‌ನಲ್ಲಿ ದಾಖಲಾಗಿದೆ. ಅದು ಫ್ರಾನ್ಸ್‌ನ ಹಿಂದಿನ ದಾಖಲೆಯಾಗಿರುವ 44.1 ಡಿಗ್ರಿ ಸೆಲ್ಸಿಯಸನ್ನು ಮೀರಿಸಿದೆ. ಹಿಂದಿನ ದಾಖಲೆಯು 2003 ಆಗಸ್ಟ್‌ನಲ್ಲಿ ಸೇಂಟ್ ಲೆಸ್ ಆ್ಯಲಿಸ್ ಮತ್ತು ಕಾಂಕಯ್ರ್‌ಕ್‌ನಲ್ಲಿ ದಾಖಲಾಗಿತ್ತು ಎಂದು ಮೆಟ್ರೊ-ಫ್ರಾನ್ಸ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಸ್ಪೇನ್‌ನಲ್ಲಿ ಇಬ್ಬರ ಸಾವು

ಈ ನಡುವೆ, ಇಡೀ ಯುರೋಪ್ ತೀವ್ರ ಉಷ್ಣತೆಯಿಂದ ಬಳಲುತ್ತಿದ್ದು, ಸ್ಪೇನ್‌ನಲ್ಲಿ ಇಬ್ಬರು ಬಿಸಿಲಿನ ಝಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಅತಿ ಉಷ್ಣತೆಯಿಂದಾಗಿ ಇಟಲಿ, ಫ್ರಾನ್ಸ್ ಮತ್ತು ಜರ್ಮನಿಯಲ್ಲೂ ಜನರು ಮೃತಪಟ್ಟಿರುವ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News