ಕೊರಿಯದ ಸೇನಾರಹಿತ ವಲಯದಲ್ಲಿ ಭೇಟಿ: ಕಿಮ್‌ಗೆ ಟ್ರಂಪ್ ಆಹ್ವಾನ

Update: 2019-06-29 16:19 GMT

ಒಸಾಕ, ಜೂ. 29: ಕೊರಿಯ ಪರ್ಯಾಯ ದ್ವೀಪವನ್ನು ಉತ್ತರ ಮತ್ತು ದಕ್ಷಿಣ ಎಂಬುದಾಗಿ ವಿಭಜಿಸುವ ಸೇನಾರಹಿತ ವಲಯದಲ್ಲಿ ಐತಿಹಾಸಿಕ ಕೈಕುಲುವಿಕೆಗಾಗಿ ಭೇಟಿಯಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ಗೆ ಆಹ್ವಾನ ನೀಡಿದ್ದಾರೆ.

ಗಡಿಯ ಮೇಲೆ ಕಾಲಿಡಲು ‘ನನಗೇನೂ ಸಮಸ್ಯೆ’ಯಿಲ್ಲ ಎಂದು ಅವರು ಹೇಳಿದರು.

ಟ್ವಿಟರ್‌ನಲ್ಲಿ ನೀಡಲಾದ ಆಮಂತ್ರಣವು ವೀಕ್ಷಕರನ್ನು ಅಚ್ಚರಿಯಲ್ಲಿ ಕೆಡವಿದೆ. ಇದಕ್ಕೆ ಕಿಮ್ ಒಪ್ಪಿಗೆ ನೀಡಿದರೆ, ಅದು ಉಭಯ ನಾಯಕರ ನಡುವಿನ ಮೂರನೇ ಸಭೆಯಾಗುತ್ತದೆ.

ಆಹ್ವಾನವು ‘ಅತ್ಯಂತ ಆಸಕ್ತಿದಾಯಕ ಸಲಹೆ’ಯಾಗಿದೆ, ಆದರೆ ಯಾವುದೇ ಅಧಿಕೃತ ಮನವಿಯನ್ನು ಸ್ವೀಕರಿಸಲಾಗಿಲ್ಲ ಎಂಬುದಾಗಿ ಉತ್ತರ ಕೊರಿಯದ ಉಪ ವಿದೇಶ ಸಚಿವ ಚೋ ಸೊನ್ ಹುಯಿ ಹೇಳಿರುವುದಾಗಿ ಆ ದೇಶದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.

 ಜಿ20 ಶೃಂಗ ಸಮ್ಮೇಳನ ನಡೆಯುತ್ತಿರುವ ಒಸಾಕದಲ್ಲಿ ಈ ಅಚ್ಚರಿಯ ಆಹ್ವಾನವನ್ನು ನೀಡಿದ ಟ್ರಂಪ್, ‘‘ಉತ್ತರ ಕೊರಿಯದ ಚೇರ್‌ಮನ್ ಕಿಮ್ ಇದನ್ನು ನೋಡಿದರೆ, ಅವರ ಕೈಕುಲುವುದಕ್ಕಾಗಿ ಹಾಗೂ ‘ಹಲೋ’ ಎಂದು ಹೇಳುವುದಕ್ಕಾಗಿ ಗಡಿ/ಸೇನಾರಹಿತ ವಲಯದಲ್ಲಿ ನಾನು ಅವರನ್ನು ಭೇಟಿಯಾಗುತ್ತೇನೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News