ಜನಾಂಗಭೇದ ನೀತಿ: ಸ್ಕಾಟ್‌ ಲ್ಯಾಂಡ್ ಯಾರ್ಡ್ ವಿರುದ್ಧ ಭಾರತೀಯ ಮೂಲದ ಮಹಿಳಾ ಅಧಿಕಾರಿಯ ದೂರು

Update: 2019-07-07 18:41 GMT

  ಲಂಡನ್, ಜು.7: ಸ್ಕಾಟ್‌ ಲ್ಯಾಂಡ್ ಯಾರ್ಡ್ ವಿರುದ್ಧ ಭಾರತೀಯ ಮೂಲದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಜನಾಂಗಭೇದ ನೀತಿ ಮತ್ತು ಲಿಂಗ ತಾರತಮ್ಯ ಧೋರಣೆ ತೋರುತ್ತಿರುವ ಬಗ್ಗೆ ದೂರು ನೀಡಿದ್ದಾರೆ.

 ಮೆಟ್ರೊಪಾಲಿಟನ್ ಪೊಲೀಸ್ ವಿಭಾಗದಲ್ಲಿ ತಾತ್ಕಾಲಿಕ ಮುಖ್ಯ ಸೂಪರಿಂಟೆಂಡೆಂಟ್ ಆಗಿರುವ ಪರಮ್ ಸಂಧು ದೂರು ನೀಡಿದ್ದು , ತನ್ನ ಕುಲ ಮತ್ತು ಲಿಂಗದ ಕಾರಣದಿಂದ ತನಗೆ ಭಡ್ತಿ ಅವಕಾಶ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ. ಸಂಧು ಅವರನ್ನು ಮೆಟ್ರೊಪಾಲಿಟನ್ ಬ್ಲಾಕ್ ಪೊಲೀಸ್ ಅಸೋಸಿಯೇಷನ್ ಬೆಂಬಲಿಸಿದ್ದು , ಜನಾಂಗೀಯ ಅಲ್ಪಸಂಖ್ಯಾತ ಮಹಿಳಾ ಅಧಿಕಾರಿಗಳ ಕೊರತೆ ಆತಂಕಕಾರಿಯಾಗಿದೆ ಎಂದಿದೆ.

   54 ವರ್ಷದ ಸಂಧು ವಿರುದ್ಧ ದಾಖಲಾಗಿದ್ದ ದುರ್ನಡತೆಯ ಆರೋಪದಿಂದ ಅವರನ್ನು ಕಳೆದ ತಿಂಗಳು ಖುಲಾಸೆಗೊಳಿಸಲಾಗಿತ್ತು. ಆ ಬಳಿಕ ಸಂಧು, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕ್ವೀನ್ಸ್ ಪೊಲೀಸ್ ಪದಕ ಪ್ರಶಸ್ತಿಗೆ ತನ್ನ ಹೆಸರು ನಾಮನಿರ್ದೇಶನಗೊಳಿಸಲು ಬೆಂಬಲಿಸುವಂತೆ ಸಹೋದ್ಯೋಗಿಗಳನ್ನು ಸಂಧು ಕೇಳಿಕೊಂಡಿದ್ದರು ಎಂಬ ಆರೋಪ ಇವರ ಮೇಲಿತ್ತು. ಆದರೆ ಪ್ರಕರಣದ ವಿಚಾರಣೆ ನಡೆಸಿದ್ದ ಸಮಿತಿ ಆರೋಪವನ್ನು ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News