ಅಮೆರಿಕ, ತಾಲಿಬಾನ್ ನಡುವೆ ಮಾತುಕತೆ ಪುನರಾರಂಭ

Update: 2019-07-09 18:35 GMT

ಕಾಬೂಲ್, ಜು. 9: ಅಫ್ಘಾನಿಸ್ತಾನದ 18 ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಮಾತುಕತೆಗಳನ್ನು ಅಮೆರಿಕ ಮತ್ತು ತಾಲಿಬಾನ್ ಅಧಿಕಾರಿಗಳು ಮಂಗಳವಾರ ಖತರ್‌ನಲ್ಲಿ ಪುನರಾರಂಭಿಸಿದ್ದಾರೆ.

ಅಮೆರಿಕ ಮತ್ತು ತಾಲಿಬಾನ್ ಒಪ್ಪಂದವೊಂದರ ಸಮೀಪ ತಲುಪುತ್ತಿವೆ. ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರನ್ನು ಅಮೆರಿಕ ವಾಪಸ್ ಕರೆಸಿಕೊಳ್ಳುವುದು ಹಾಗೂ ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗಿ ಬಳಸಿಕೊಳ್ಳದಿರುವ ಭರವಸೆಯನ್ನು ತಾಲಿಬಾನ್ ನೀಡುವುದು- ಇವುಗಳ ಆಧಾರದಲ್ಲಿ ಉಭಯ ಬಣಗಳ ನಡುವೆ ಒಪ್ಪಂದ ಏರ್ಪಡಬಹುದಾಗಿದೆ ಎಂದು ಅಮೆರಿಕ ಅಧಿಕಾರಿಗಳು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News