ಹಡಗನ್ನು ಬಂಧಮುಕ್ತಗೊಳಿಸಿ ಉದ್ವಿಗ್ನತೆ ಶಮನಗೊಳಿಸಿ: ಇರಾನ್‌ಗೆ ಬ್ರಿಟನ್ ಆಗ್ರಹ

Update: 2019-07-21 16:58 GMT

ಲಂಡನ್,ಜು.21: ವಶಪಡಿಸಿಕೊಂಡಿರುವ ಬ್ರಿಟಿಶ್ ಹಡಗನ್ನು ಬಿಡುಗಡೆಗೊಳಿಸುವ ಮೂಲಕ ಗಲ್ಫ್ ಪ್ರಾಂತದಲ್ಲಿ ಭುಗಿಲೆದ್ದಿರುವ ಉದ್ವಿಗ್ನತೆಯನ್ನು ಶಮನಗೊಳಿಸುವಂತೆ ಬ್ರಿಟನ್ ದೇಶವು ಇರಾನ್‌ನ್ನು ಆಗ್ರಹಿಸಿದೆ. ಓಮಾನ್‌ಗೆ ಸೇರಿದ ಸಾಗರಪ್ರದೇಶದಲ್ಲಿ ಸಂಚರಿಸುತ್ತಿದ್ದ ಬ್ರಿಟಿಶ್ ಹಡಗನ್ನು ಇರಾನ್ ಅಕ್ರಮವಾಗಿ ವಶಪಡಿಕೊಂಡಿರುವುದು ಅಸ್ವೀಕಾರಾರ್ಹವಾದುದೆಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

ವಶಪಡಿಸಿಕೊಳ್ಳಲಾದ ತೈಲ ಟ್ಯಾಂಕರ್ ನೌಕೆಯನ್ನು ಬಂಧಮುಕ್ತಗೊಳಿಸಬೇಕೆಂದು ಯುರೋಪ್ ರಾಷ್ಟ್ರಗಳ ಬಲವಾಗಿ ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News