ಹೊರಬಿದ್ದ ಪೇಸ್, ಡೇನಿಯಲ್ ಜೋಡಿ

Update: 2019-07-21 18:26 GMT

ನ್ಯೂಪೋರ್ಟ್,ಜು.21: ಇಲ್ಲಿ ನಡೆಯುತ್ತಿರುವ ಎಟಿಪಿ ಹಾಲ್ ಆಫ್ ಫೇಮ್ ಓಪನ್ ಸೆಮಿ ಫೈನಲ್‌ನಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಮತ್ತು ನ್ಯೂಝಿಲ್ಯಾಂಡ್‌ನ ಮಾರ್ಕಸ್ ಡೇನಿಯಲ್ ಜೋಡಿ ಸ್ಪೇನ್‌ನ ಮರ್ಸೆಲ್ ಗ್ರನೊಲರ್ಸ್ ಮತ್ತು ಉಕ್ರೇನ್ ಆಟಗಾರ ಸೆರ್ಜಿ ಸ್ಟತೊಸ್ಕಿ ಜೋಡಿ ವಿರುದ್ಧ 6-3, 6-7(8), 9-11 ಅಂಕಗಳ ಅಂತರದಿಂದ ಸೋಲೊಪ್ಪುವ ಮೂಲಕ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ. ಈ ಸೆಮಿ ಫೈನಲ್ ಪಂದ್ಯದಲ್ಲಿ ಆಡುವ ಮೂಲಕ ಪೇಸ್, ಎಟಿಪಿ ಪಂದ್ಯಾವಳಿಗಳ ಸೆಮಿ ಫೈನಲ್‌ನಲ್ಲಿ ಆಡಿದ ಅತ್ಯಂತ ಹಿರಿಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಅಮೆರಿಕದ ಆಟಗಾರ ಜಾನ್ ಮೆಕೆನ್ರೊ ಇದ್ದಾರೆ.

ಪ್ರಸಕ್ತ ಟೆನಿಸ್ ಮಾಸದಲ್ಲಿ ಪೇಸ್ ನಾಲ್ಕನೇ ಬಾರಿ ಎಟಿಪಿ ಟೂರ್ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೊದಲು ಮೇಯಲ್ಲಿ ಲ್ಯೋನ್, ಎಪ್ರಿಲ್‌ನಲ್ಲಿ ಮರ್ರಕೆಚ್ ಮತ್ತು ಫೆಬ್ರವರಿಯಲ್ಲಿ ಮೊಂಟ್‌ಪೆಲಿರ್ ಪಂದ್ಯಾವಳಿಗಳ ಉಪಾಂತ್ಯ ತಲುಪಿದ್ದರು.

ಒಟ್ಟು 766 ಜಯಗಳ ಮೂಲಕ ಪೇಸ್ ಅತೀ ಹೆಚ್ಚು ಡಬಲ್ಸ್ ಮ್ಯಾಚ್ ಗೆದ್ದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಅಷ್ಟು ಮಾತ್ರವಲ್ಲದೆ ಡಬಲ್ಸ್‌ನ ಪಂದ್ಯಗಳಲ್ಲಿ 750 ಜಯ ದಾಖಲಿಸಿರುವ ಆರು ಆಟಗಾರರಲ್ಲಿ ಪೇಸ್ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News