ಬೋಸ್ನಿಯದಲ್ಲಿ: ಭಾರತೀಯ ಉದ್ಯಮಿ ಪ್ರಮೋದ್ ಮಿತ್ತಲ್ ಬಂಧನ

Update: 2019-07-24 15:52 GMT

ಸರಜೇವೊ (ಬೋಸ್ನಿಯ), ಜು. 24: ಭಾರತೀಯ ಉದ್ಯಮಿ ಹಾಗೂ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ತಮ್ಮ ಪ್ರಮೋದ್ ಮಿತ್ತಲ್‌ರನ್ನು ವಂಚನೆ ಮತ್ತು ಅಧಿಕಾರ ದುರುಪಯೋಗಕ್ಕಾಗಿ ಬೋಸ್ನಿಯದಲ್ಲಿ ಬುಧವಾರ ಬಂಧಿಸಲಾಗಿದೆ.

ಬೋಸ್ನಿಯದ ಈಶಾನ್ಯ ನಗರ ಲುಕವಾಕ್‌ನಲ್ಲಿ ಕೋಕಿಂಗ್ ಸ್ಥಾವರವೊಂದನ್ನು ನಡೆಸುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದರಲ್ಲಿ ಪ್ರಮೋದ್ ಮಿತ್ತಲ್ 2003ರಿಂದ ಪಾಲುದಾರಿಕೆ ಹೊಂದಿದ್ದಾರೆ. ಅಲ್ಲಿ 1,000ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ.

‘‘ಪ್ರಾಸಿಕ್ಯೂಟರ್ ಆದೇಶದಂತೆ ಪೊಲೀಸರು ಜಿಐಕೆಐಎಲ್‌ನ ಉಸ್ತುವಾರಿ ಮಂಡಳಿಯ ಅಧ್ಯಕ್ಷ ಪ್ರಮೋದ್ ಮಿತ್ತಲ್‌ರನ್ನು ಬಂಧಿಸಿದ್ದಾರೆ’’ ಎಂದು ಪ್ರಾಸಿಕ್ಯೂಟರ್ ಕಝೀಮ್ ಸೆರ್ಹಾಟ್ಲಿಕ್ ಸುದ್ದಿಗಾರರಿಗೆ ತಿಳಿಸಿದರು.

ಕಂಪೆನಿಯ ಇತರ ಇಬ್ಬರು ಅಧಿಕಾರಿಗಳನ್ನೂ ಬಂಧಿಸಲಾಗಿದೆ. ಅವರೆಂದರೆ ಜನರಲ್ ಮ್ಯಾನೇಜರ್ ಪರಮೇಶ್ ಭಟ್ಟಾಚಾರ್ಯ ಮತ್ತು ಉಸ್ತುವಾರಿ ಮಂಡಳಿಯ ಇನ್ನೋರ್ವ ಸದಸ್ಯ.

‘‘ಅವರು ಸಂಘಟಿತ ಅಪರಾಧ, ಅದರಲ್ಲೂ ಮುಖ್ಯವಾಗಿ ಅಧಿಕಾರ ದುರುಪಯೋಗ ಮತ್ತು ಆರ್ಥಿಕ ಅಪರಾಧಗಳನ್ನು ನಡೆಸದ್ದಾರೆ ಎಂದು ಶಂಕಿಸಲಾಗಿದೆ’’ ಎಂದು ಪ್ರಾಸಿಕ್ಯೂಟರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News