ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿಯಗಿ ಮಾರ್ಕ್ ಎಸ್ಪರ್

Update: 2019-07-24 15:56 GMT

ವಾಶಿಂಗ್ಟನ್, ಜು. 24: ಮಾರ್ಕ್ ಎಸ್ಪರ್‌ರನ್ನು ಅಮೆರಿಕದ ಮುಂದಿನ ರಕ್ಷಣಾ ಕಾರ್ಯದರ್ಶಿಯಾಗಿ ಸೆನೆಟ್ ಮಂಗಳವಾರ ಖಚಿತಪಡಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸುಮಾರು ಏಳು ತಿಂಗಳ ಹಿಂದೆ ಜೇಮ್ಸ್ ಮ್ಯಾಟಿಸ್ ರಾಜೀನಾಮೆ ನೀಡಿದ ಬಳಿಕ ನೂತನ ಕಾರ್ಯದರ್ಶಿಯ ನೇಮಕ ಆಗುತ್ತಿದೆ.

ಉಸ್ತುವಾರಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಪ್ಯಾಟ್ರಿಕ್ ಶಾನಹನ್ ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ರಾಜೀನಾಮೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News