ತೆವಳುತ್ತಾ ಗ್ರಾಹಕನ ತಟ್ಟೆಯಿಂದ ‘ಜಿಗಿದ’ ಹಸಿ ಮಾಂಸದ ತುಂಡು!

Update: 2019-07-25 10:45 GMT

ಫ್ಲೋರಿಡಾ, ಜು.25: ರೆಸ್ಟೋರೆಂಟ್ ಒಂದರಲ್ಲಿ ಗ್ರಾಹಕನ ಪ್ಲೇಟಿನಲ್ಲಿದ್ದ ಹಸಿ ಮಾಂಸದ ತುಂಡೊಂದು ಮೆಲ್ಲನೆ ತೆವಳುತ್ತಾ ಹೊರ ಬಂದು ನಂತರ ನೆಲಕ್ಕೆ ಬೀಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಫ್ಲೋರಿಡಾದ ರೀ ಫಿಲಿಪ್ಸ್ ಎಂಬವರು ಈ ವೀಡಿಯೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇಲ್ಲಿಯ ತನಕ 40 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋ ವೀಕ್ಷಿಸಿದ್ದಾರೆ.

ಮಾಂಸದ ತುಂಡು ನೆಲಕ್ಕೆ ಬೀಳುತ್ತಿದ್ದಂತೆಯೇ ರೆಸ್ಟೋರೆಂಟ್ ನಲ್ಲಿದ್ದ ಹಾಗೂ ವೀಡಿಯೋ ತೆಗೆಯುತ್ತಿದ್ದ ಮಹಿಳೆಯೊಬ್ಬರು ಚೀರಾಡುವುದು ಕೇಳಿಸುತ್ತದೆ. ಆದರೆ ಈ ಘಟನೆ ಯಾವ ರೆಸ್ಟೋರೆಂಟ್ ನಲ್ಲಿ ನಡೆದಿತ್ತೆನ್ನುವುದು ತಿಳಿದು ಬಂದಿಲ್ಲ.

ಕೆಲವರು ಇದೊಂದು ನಕಲಿ ವೀಡಿಯೋ ಎಂದು ಹೇಳಿದರೆ ಇನ್ನು ಕೆಲವರು ಮಾಂಸದ ತುಂಡಿನಲ್ಲಿನ ತುಂಡಾದ ನರಗಳಿಂದ ಹೀಗಾಗಿರಬಹುದೆಂದು ಅಂದಾಜಿಸಿದ್ದಾರೆ.

ಮಾಂಸದ ತುಂಡಿಗೆ ಸಣ್ಣ ಹಗ್ಗವನ್ನು ಕಟ್ಟಿ ಅದು ಅಲುಗಾಡುವಂತೆ ಮಾಡಿರಬಹುದೆಂದು ಈ ವೀಡಿಯೋ ನೋಡಿದವರೊಬ್ಬರು ಶಂಕಿಸಿದ್ದಾರೆ. ಆದರೆ ಮಾಂಸ ಹಸಿಯಾಗಿದ್ದರಿಂದ ಅದು ಚಲಿಸಿರಬಹುದೆಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ. ಈ ಮಾಂಸ  ಜೀವಂತವಿರುವಾಗಲೇ ಚರ್ಮ ಸುಲಿಯಲ್ಪಟ್ಟ ಕಪ್ಪೆಯದ್ದಾಗಿದ್ದರಿಂದ ಅದು ಜಿಗಿದಿರಬಹುದೆಂಬ ವಿಚಿತ್ರ ವಿವರಣೆಯನ್ನೂ ಕೆಲವರು ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News